ಕೆಪಿಟಿಸಿಎಲ್‌, ಎಸ್ಕಾಂ ನೌಕರರ ವೇತನ ಹೆಚ್ಚಳ

0
116
sunilkumar

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಮಮಿತ ಮತ್ತು ಎಲ್ಲಾ ಎಸ್ಕಾಂಗಳ ನೌಕರರ ವೇತನ ಹೆಚ್ಚಳ ಮಾಡಿ ಇಂಧನ ಸಚಿವ ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ವೇತನ ಪರಿಷ್ಕರಣೆಗಾಗಿ ಮುಷ್ಕರಕ್ಕೆ ಕರೆ ನೀಡಿದ ಬೆನ್ನಲ್ಲೇ ಎಪ್ರಿಲ್‌ 2022 ರಿಂದ ಜಾರಿಯಾಗುವಂತೆ ಶೇ. 20ರಷ್ಟು ವೇತನ ಹೆಚ್ಚಳ ಮಾಡಲು ಸಚಿವರು ಆದೇಶಿಸಿದ್ದಾರೆ.
ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಗುರುವಾರ ಕೆಲಸ ಸ್ಥಗಿತ ಮಾಡಿ ಮುಷ್ಕರ ನಡೆಸಲು ನಿರ್ಧರಿಸಿದ್ದರು. ಲೈನ್‍ಮ್ಯಾನ್‍ಗಳಿಂದ ಎಂಜಿನಿಯರ್‌ವರೆಗೆನ ಎಲ್ಲ ಸಿಬ್ಬಂದಿ ಸೇರಿ ಸುಮಾರು 60 ಸಾವಿರ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದರು. ಸಚಿವರ ಭರವಸೆಯಿಂದ ಎಸ್ಕಾಂ ಸಿಬ್ಬಂದಿ ಹೋರಾಟಕ್ಕೂ ಮುನ್ನವೇ ಜಯ ದೊರಕಿದೆ.

kptcl
Previous articleರಾಹುಲ್‌ ಬಂದ್ರೂ ಏನೂ ಎಫೆಕ್ಟ್‌ ಆಗಲ್ಲ
Next articleರಾಹುಲ್‌ ಗಾಂಧಿ ಕ್ಷಮೆ ಕೇಳುವುದಿಲ್ಲ: ಖರ್ಗೆ