ಬೆಂಗಳೂರು: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ಸರ್ಕಾರ 2000 ರೂ ಹೆಚ್ಚಳ ಮಾಡುವುದಾಗಿ ಗುಡ್ ನೂಸ್ ನೀಡದೆ. ಬೆಳ್ಳಗೆ ಯು.ಟಿ ಖಾದರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ.
ನವೆಂಬರ್ 17ರಿಂದ ಆರಂಭವಾಗಿರುವ ಪ್ರತಿಭಟನೆಗೆ ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಕಾರ್ಯಕರ್ತೆಯರು ಭಾಗಿಯಾಗಿದ್ದಾರೆ. ₹15,000 ಮಾಸಿಕ ಗೌರವಧನದ ಬೇಡಿಕೆ ಈಡೇರುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದರು.
ಪ್ರತಿಭಟನೆಯ 12 ನೇ ದಿನಕ್ಕೆ ಆರೋಗ್ಯ ಸಚಿವ ಯು.ಟಿ ಖಾದರ್ ಆಶಾ ನಿಯೋಗ ವನ್ನು ತಮ್ಮ ಮನೆಗೆ ಆಹ್ವಾನಿಸಿ ಸಂಘದ ಅಧ್ಯಕ್ಷೆ ನಾಗಲಕ್ಷ್ಮೀ ಜೋತೆ ಮಾತನಾಡಿ ಅಧಿವೇಶನದ ನಂತರ ವೇತನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದರು ಆದರೆ ಆಶಾ ನಿಯೋಗ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದಾಗ. ಸಚಿವ ಯು.ಟಿ.ಖಾದರ್ ಸಿಎಂ ಡಿ.ಕೆ ಶಿವಕುಮಾರ್ ಅವರ ಜೋತೆ ಕರೆಯಲ್ಲಿ ಮಾತನಾಡಿ 2000 ರೂ ಹೆಚ್ಚಳ ಮಾಡುವುದಾಗಿ ತಿಳಿಸಿದರು ಇದಕ್ಕೆ ಆಶಾಗಳು ಒಪ್ಪಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಸಿಎಂ ನೇತೃತ್ವದ ಮತ್ತೊಂದು ಸುತ್ತಿನ ಸಭೆಯಲ್ಲಿ ಘೋಷಿಸುವುದಾಗಿ ಮತ್ತು ನನ್ನ ನೇತೃತ್ವದ ಸಭೆ ವಿಫಲವಾಗಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.
ಇದರೊಂದಿಗೆ ಇಂದು ಸಂಜೆ ಸಭೆಯ ಬಳಿಕ ಆಶಾ ಹೋರಾಟ ಇಂದು 12 ನೇ ದಿನಕ್ಕೆ ಮುಕ್ತಾಯವಾಗುತ್ತದೆ ಎಂದು ಹೇಳಬಹುದು. ಗುಲಾಬಿ ಪಡೆಗೆ ಹೋರಾಟದ ಜಯ ಸಿಕಿದ್ದಾಗಿದೆ.






















