SK Home Ad
Home ಸಿನಿ ಮಿಲ್ಸ್ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸ: 100 ಕೋಟಿ ಕ್ಲಬ್ ಸೇರಿದ ‘ಪ್ರೇಮದ ಊರಲಿ’ ಸಿನಿಮಾ!

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸ: 100 ಕೋಟಿ ಕ್ಲಬ್ ಸೇರಿದ ‘ಪ್ರೇಮದ ಊರಲಿ’ ಸಿನಿಮಾ!

0
28

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಸೃಷ್ಟಿಸಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆಯುವತ್ತ ದಾಪುಗಾಲಿಟ್ಟಿದೆ. ಬಿಡುಗಡೆಯಾಗಿ ನಾಲ್ಕು ವಾರಗಳು ಕಳೆದರೂ ಪ್ರೇಕ್ಷಕರ ಮಹಾಪೂರವೇ ಹರಿದುಬರುತ್ತಿದ್ದು, ಕಲೆಕ್ಷನ್ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಜಾಗತಿಕ ಮಟ್ಟದಲ್ಲಿ ಒಟ್ಟು 111.07 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಈ ಚಿತ್ರ ನೂರು ಕೋಟಿ ಕ್ಲಬ್ ಸೇರಿದೆ.

ಆರಂಭದಲ್ಲಿ ಮಂದಗತಿಯಲ್ಲಿ ಸಾಗಿದ ಚಿತ್ರ ಮೊದಲ ವಾರದಲ್ಲಿ 5.32 ಕೋಟಿ ರೂಪಾಯಿ ಗಳಿಸಿತ್ತು. ಆದರೆ, ಪ್ರೇಕ್ಷಕರ ಧನಾತ್ಮಕ ಪ್ರತಿಕ್ರಿಯೆಯಿಂದ ಎರಡನೇ ವಾರಕ್ಕೆ 23.65 ಕೋಟಿ ರೂಪಾಯಿ ಬಾಚಿಕೊಂಡಿತು. ಮೂರನೇ ವಾರದಲ್ಲಿ ನಿರೀಕ್ಷೆ ಮೀರಿ ಬರೋಬ್ಬರಿ 36.40 ಕೋಟಿ ರೂಪಾಯಿ ಹರಿದುಬಂತು. ಪ್ರಸ್ತುತ ನಾಲ್ಕನೇ ವಾರದಲ್ಲೂ ಅಬ್ಬರ ಮುಂದುವರಿದಿದ್ದು, ಭಾರತೀಯ ನೆಟ್ ಕಲೆಕ್ಷನ್ 92.37 ಕೋಟಿ ರೂಪಾಯಿ ತಲುಪಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ಮನೋಜ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಂಗಾಯಣ ರಘು, ಶ್ರೀರಾಮ್, ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಐತಿಹಾಸಿಕ ಯಶಸ್ಸು ಗಾಂಧಿನಗರದಲ್ಲಿ ಹಳೆಯ ವೈಭವವನ್ನು ಮರುಕಳಿಸುವಂತೆ ಮಾಡಿದೆ.