ಹಂಪಿಯಲ್ಲಿ ವಿದೇಶಿಗರಿಂದ ಮದ್ಯ ಸೇವನೆ

0
9
purandradasa-mantapa

ಹೊಸಪೇಟೆ: ಐತಿಹಾಸಿಕ ಹಂಪಿಯ ಸ್ಮಾರಕದ ಬಳಿ ವಿದೇಶಿ ಪ್ರವಾಸಿಗರು ಮದ್ಯ ಸೇವನೆ ಮಾಡಿರುವ ಆರೋಪ ಕೇಳಿ ಬಂದಿದೆ. ಹಂಪಿಯ ಪುರಂದರ ಮಂಟಪದ ಬಳಿ ವಿದೇಶಿಗರು ಮದ್ಯ ಸೇವನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಕೂಡಲೇ ಕ್ರಮವಹಿಸಬೇಕು ಎಂಬುದು ಚರಿತ್ರೆಪ್ರಿಯರ ಒತ್ತಾಯವಾಗಿದೆ.
ಹಂಪಿಯ ಪಾವಿತ್ರ್ಯತೆ ಕಾಪಾಡಬೇಕು. ಹಂಪಿಯಲ್ಲಿ ಮದ್ಯಪಾನ, ಮಾಂಸಾಹಾರ ಸೇವನೆ ಮಾಡಬಾರದು ಅಂತ ಬೋರ್ಡ್ಗಳನ್ನು ಹಾಕಲಾಗಿದೆ. ಆದರೆ, ಈ ರೀತಿ ಮದ್ಯಪಾನ ಸೇವನೆ, ಮೋಜು, ಮಸ್ತಿ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Previous articleಅಡುಗೆ ಎಣ್ಣೆ ಕಳ್ಳರ ಬಂಧನ
Next articleಶ್ರೀ ಸಿದ್ಧಾರೂಢರಿಗೆ ಕೌದಿ ಪೂಜೆ ನೆರವೇರಿಸಿದ ಭಕ್ತಸಮೂಹ