ಕಳ್ಳತನವಾಗಿದ್ದ ಕೆಎಸ್‌ಆರ್‌ಟಿಸಿ ಬಸ್‌ ಪತ್ತೆ

0
108
ಬಸ್

ಚಿಂಚೋಳಿ ಬಸ್ ನಿಲ್ದಾಣದಿಂದ ಕಳ್ಳತನವಾಗಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ಕಳ್ಳತನವಾದ 13ಗಂಟೆಯೊಳಗೆ ಪತ್ತೆ ಮಾಡುವಲ್ಲಿ ಚಿಂಚೋಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲಬುರಗಿ ಜಿಲ್ಲೆ ಚಿಂಚೋಳ್ಳಿ ಪಟ್ಟಣದಲ್ಲಿರೋ ಬಸ್ ನಿಲ್ದಾಣದಿಂದ ಇಂದು ನಸುಕಿವ ಜಾವ 3.30ಕ್ಕೆ ಬಸ್(ಕೆಎ 38, ಎಫ್ 971) ಕಳ್ಳತನವಾಗಿತ್ತು. ಈ ಬಗ್ಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತೆಲಂಗಾಣ ರಾಜ್ಯದ ತಾಂಡೂರು ತಾಲೂಕಿನ ಭೂ ಕೈಲಾಸ ತಾಂಡಾದಲ್ಲಿ ಬಸ್ ಪತ್ತೆಯಾಗಿದೆ. ತಾಂಡಾ ಹೊರವಲಯದಲ್ಲಿ ಖದೀಮರು ಬಸ್ ಬಿಟ್ಟು ಹೋಗಿದ್ದಾರೆ. ಸದ್ಯ ಬಸ್ ಪತ್ತೆ ಮಾಡಿರುವ ಚಿಂಚೋಳಿ ಪೊಲೀಸರು ಇದೀಗ ಕಳ್ಳತನ ಮಾಡಿದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Previous articleಕಾಡಾನೆ ದಾಳಿ: ತೆಂಗು, ಮಾವಿನ ಮರ ನಾಶ
Next articleಬೇಲೂರು ಶ್ರೀ ಚೆನ್ನಕೇಶವ ದೇಗುಲ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ ನಿರೀಕ್ಷೆ: ಸಿಎಂ