Home Advertisement
Home ತಾಜಾ ಸುದ್ದಿ ರೂಪಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ: ರೋಹಿಣಿ

ರೂಪಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ: ರೋಹಿಣಿ

0
157
ರೋಹಿಣಿ ಸಿಂಧೂರಿ

ರೂಪಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರು ಮಾನಸಿಕ ಚಿಕಿತ್ಸೆ ಪಡೆದುಕೊಳ್ಳಬೇಕು, ಜವಾಬ್ದಾರಿ ಸ್ಥಾನದಲ್ಲಿರುವವರಿಗೆ ಈ ರೀತಿಯ ಸಮಸ್ಯೆ ಬಂದರೆ ತುಂಬಾ ಅಪಾಯ ಎಂದು ಐಪಿಎಸ್‌ ಅಧಿಕಾರಿ (ಐಜಿಪಿ) ಡಿ. ರೂಪಾ ಮೌದ್ಗಿಲ್‌ ಅವರಿಗೆ ರೋಹಿಣಿ ಸಿಂಧೂರಿ ತಿರುಗೇಟು ನೀಡಿದ್ದಾರೆ.
ಡಿ. ರೂಪಾ ಮೌದ್ಗಿಲ್‌ ಇಂದು ಮುಂಜಾನೆ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ಹಂಚಿಕೊಂಡು ವೈರಲ್‌ ಮಾಡುತ್ತಿದ್ದು, ಈ ಕುರಿತು ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದರು. ಇದಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ರೋಹಿಣಿ ಸಿಂಧೂರಿ ಅವರು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ರೂಪಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನನ್ನ ಮೇಲೆ ಹಬ್ಬಿಸುತ್ತಿರುವ ಸುಳ್ಳು ಆಪಾದನೆಗಳೆಲ್ಲ ವ್ಯವಸ್ಥಿತ ಪಿತೂರಿಯಾಗಿದೆ. ಎಲ್ಲಾ ಕಡೆಯೂ ಹೀಗೆ ಸುಳ್ಳು ಆಪಾದನೆಗಳನ್ನು ಹಬ್ಬಿಸಲಾಗುತ್ತಿದೆ. ಐಪಿಸಿ ಅಡಿಯಲ್ಲಿ ರೂಪಾ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂದು ಹೇಳಿದ್ದಾರೆ.

Previous articleಸಚಿವ ಅಶ್ವತ್ಥನಾರಾಯಣ ಕ್ಷಮೆಯಾಚಿಸಬೇಕು: ಬಯ್ಯಾಪುರ
Next articleರೋಹಿಣಿ ವಿರುದ್ಧ ರೂಪಾ ಮತ್ತೆ ವಾಗ್ದಾಳಿ