ಬಾಲಿವುಡ್ ನಟ ಸಂಜಯ್ ದತ್ ಅವರ ಇತ್ತೀಚಿನ ಹೇಳಿಕೆಯೊಂದು ಮಹಾರಾಷ್ಟ್ರದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂಬೈನಲ್ಲಿ ನಡೆದ ದಹಿಹಂಡಿ ಕಾರ್ಯಕ್ರಮವೊಂದರಲ್ಲಿ ಅವರಿಗೆ ಮರಾಠಿ ಮಾತನಾಡಲು ಆಗ್ರಹಿಸಿದರು. ಆದರೆ ಸಂಜಯ್ ದತ್ ನಾನು ಆರು ವರ್ಷ ಯರವಡಾ ಜೈಲಿನಲ್ಲಿ ಇದ್ದರು ಕಲಿಯಲಿಲ್ಲ ಎಂದು ಹಾಸ್ಯಸ್ಪದವಾಗಿ ಹೇಳಿದರು. ಆದರೆ ಹಳೆಯ ವಿಡಿಯೋವೊಂದರಲ್ಲಿ ಮರಾಠಿಯಲ್ಲಿ ಸರಾಗವಾಗಿ ಮಾತನಾಡುವ ವಿಡಿಯೋ ಒಂದು ವೈರಲ್ ಆಗಿದೆ.
ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಸಾರಿಗೆ ಸಚಿವ ಪ್ರತಾಪ್ ಸರನಾಯಕ್ ಅವರ ದಹಿಹಂಡಿ ಕಾರ್ಯಕ್ರಮವೊಂದರಲ್ಲಿ ಪ್ರತಾಪ್ ನಾನು ಎಲ್ಲರಿಗೆ ಮರಾಠಿ ಭಾಷೆ ಕಲಿಸ್ತಾ ಇದಿನಿ, ಸಂಜಯ್ ದತ್‌ಗೆ ಮರಾಠಿಯಲ್ಲಿ ಮಾತನಾಡುವಂತೆ ಮನವಿ ಮಾಡಿದರು.
ಆದರೆ ಸಂಜಯ್ ದತ್ ಹಾಸ್ಯಮಯವಾಗಿ ಪ್ರತಿಕ್ರಿಯಿಸಿ, ತಾನು ಆರು ವರ್ಷ ಯರವಡಾ ಜೈಲಿನಲ್ಲಿ ಇದ್ದರೂ ಮರಾಠಿ ಕಲಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಆದರೆ ಸಂಜಯ್ ದತ್ ಅವರ ಹಳೆಯ ವಿಡಿಯೋವೊಂದರಲ್ಲಿ ಮರಾಠಿಯಲ್ಲಿ ಸರಾಗವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ ಇದರಿಂದ ಅವರ ಇತ್ತೀಚಿನ ಹೇಳಿಕೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಚರ್ಚೆ ಆರಂಭವಾಗಿದೆ.
ಕೆಲವರು ಇದನ್ನು ನಟನ ಹಾಸ್ಯಪ್ರಜ್ಞೆಯ ಭಾಗವೆಂದು ನೋಡಿದರೆ, ಇನ್ನು ಕೆಲವರು ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ದೀರ್ಘಕಾಲ ವಾಸವಾಗಿರುವ ವ್ಯಕ್ತಿಯೊಬ್ಬರು ಮರಾಠಿ ಮಾತನಾಡದಿರುವ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.




















