SK Home Ad
Home ಸಿನಿ ಮಿಲ್ಸ್ BBK13 ಮನೆಯಲ್ಲಿ ರೂಲ್ಸ್ ಬ್ರೇಕ್: ಗಗನ್-ತಾಂಡವ್‌ಗೆ ಬಿಗ್ ಬಾಸ್ ಕಠಿಣ ಶಿಕ್ಷೆ ನೀಡ್ತಾರಾ?

BBK13 ಮನೆಯಲ್ಲಿ ರೂಲ್ಸ್ ಬ್ರೇಕ್: ಗಗನ್-ತಾಂಡವ್‌ಗೆ ಬಿಗ್ ಬಾಸ್ ಕಠಿಣ ಶಿಕ್ಷೆ ನೀಡ್ತಾರಾ?

0
18

BBK13 : ‘ಬಿಗ್ ಬಾಸ್’ ಕನ್ನಡ ಮನೆಯಲ್ಲಿ ಕಟ್ಟುನಿಟ್ಟಿನ ನೀತಿ-ನಿಯಮಗಳಿವೆ. ಆದ್ರೆ ಇತ್ತೀಚಿನ ಸಂಚಿಕೆಯಲ್ಲಿ ನಟ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ಶೋನ ಅತ್ಯಂತ ಪ್ರಮುಖ ನಿಯಮವಾದ ‘ನಾಮಿನೇಷನ್ ಚರ್ಚೆ’ಯನ್ನು ಗಾಳಿಗೆ ತೂರಿ ಸಾರ್ವಜನಿಕವಾಗಿ ಮಾತುಕತೆ ನಡೆಸಿದ್ದಾರೆ. ಮನೆಯ ಮೂಲ ನಿಯಮವನ್ನೇ ಉಲ್ಲಂಘಿಸಿರುವ ಈ ಇಬ್ಬರು ಸ್ಪರ್ಧಿಗಳಿಗೆ ಬಿಗ್ ಬಾಸ್ ಕಠಿಣ ಶಿಕ್ಷೆ ವಿಧಿಸುತ್ತಾರಾ ಎಂಬ ಕುತೂಹಲ ಸದ್ಯ ಪ್ರೇಕ್ಷಕರಲ್ಲಿ ಮೂಡಿದೆ.

ಸೆಪ್ಟೆಂಬರ್ 8ರ ‘ಕೊಹಿನೂರ್’ ಟಾಸ್ಕ್ ವೇಳೆ ಸ್ಪರ್ಧಿ ಆಸಿಯಾ ಫಿರ್ದೋಸ್ ಅವರನ್ನು ಟಾರ್ಗೆಟ್ ಮಾಡಿ ವಿಮಾನಕ್ಕೆ ಕಳುಹಿಸುವ ಯತ್ನ ನಡೆದಿತ್ತು. ಈ ಪ್ಲಾನ್ ಫಲಿಸದಿದ್ದಾಗ ಗಗನ್ ವಿರುದ್ಧ ಆಸಿಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಮುಂಬರುವ ನಾಮಿನೇಷನ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗಗನ್ ಹಾಗೂ ತಾಂಡವ್ ಮುಕ್ತವಾಗಿ ಯೋಜನೆಯನ್ನು ರೂಪಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮನೆಯ ಸ್ಪರ್ಧಿ ಮಂಜು ಅವರನ್ನು ನಾಮಿನೇಟ್ ಮಾಡಲು ಈ ಇಬ್ಬರೂ ಸಂಚು ರೂಪಿಸುತ್ತಿದ್ದು, ಈ ಪ್ಲಾನ್‌ಗೆ ಸಂಗೀತಾ ಭಟ್, ಜಗ್ಗಿ ಹಾಗೂ ಯಶಸ್ ಕೃಷ್ಣರನ್ನ ಹೇಗೆ ಬಳಸಿಕೊಳ್ಳಬೇಕು ಎಂಬುದರ ಕುರಿತು ವಿಸ್ತೃತವಾಗಿ ಚರ್ಚಿಸಿದ್ದಾರೆ. ತಾಂಡವ್, ಮಂಜು ಬಗ್ಗೆ ವ್ಯಂಗ್ಯವಾಗಿ ಮಾತನಾಡಿದರೆ, ಗಗನ್ ಇಡೀ ತಂಡವನ್ನು ತಮ್ಮ ಪರವಾಗಿ ಕನ್ವಿನ್ಸ್ ಮಾಡುವ ತಂತ್ರ ಹೆಣೆದಿದ್ದಾರೆ.

ಖಾಸಗಿಯಾಗಿ ನಡೆಯಬೇಕಾದ ನಾಮಿನೇಷನ್ ಪ್ರಕ್ರಿಯೆಯನ್ನು ಬಹಿರಂಗವಾಗಿ ಪ್ಲಾನ್ ಮಾಡಿರುವುದು ಸ್ಪಷ್ಟ ನಿಯಮಬಾಹಿರ ಕೃತ್ಯವಾಗಿದೆ. ನಿಯಮ ಮುರಿದ ಗಗನ್ ಹಾಗೂ ತಾಂಡವ್‌ಗೆ ಮಾತ್ರ ಶಿಕ್ಷೆಯಾಗುತ್ತದೆಯೋ ಅಥವಾ ಅವರಿಂದಾಗಿ ಇಡೀ ಮನೆಯ ಸದಸ್ಯರು ಶಿಕ್ಷೆ ಅನುಭವಿಸಬೇಕಾಗುತ್ತದೆಯೋ ಎಂಬುದನ್ನು ಕಾದುನೋಡಬೇಕಿದೆ. ಇನ್ನೊಂದೆಡೆ, ಮಂಜು ಪ್ರಸ್ತುತ ಸೇಫ್ ಆಗಿರುವುದರಿಂದ ಗಗನ್-ತಾಂಡವ್ ಹಣೆದ ‘ಟಾರ್ಗೆಟ್ ಪ್ಲಾನ್’ ವರ್ಕ್ ಆಗುತ್ತಾ ಇಲ್ಲವೇ ಎಂಬುದು ವೀಕ್ಷಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.