SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ 13: ಸುದೀಪ್ ಜೊತೆ ಮೋಹನ್ ಲಾಲ್, ನಾಗಾರ್ಜುನ, ಸೇತುಪತಿ ಸಂಗಮ; ಪ್ರೋಮೋ ವೈರಲ್!

ಬಿಗ್ ಬಾಸ್ 13: ಸುದೀಪ್ ಜೊತೆ ಮೋಹನ್ ಲಾಲ್, ನಾಗಾರ್ಜುನ, ಸೇತುಪತಿ ಸಂಗಮ; ಪ್ರೋಮೋ ವೈರಲ್!

0
20

ಬಿಗ್ ಬಾಸ್ 13: ಬೆಳ್ಳಿತರೆ ಮತ್ತು ಕಿರುತೆರೆಯ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನ ಆರಂಭಕ್ಕೆ ಸಮಯ ಏಣಿಕೆ ಶುರುವಾಗಿದೆ. ಸೆಪ್ಟೆಂಬರ್ 6ರ ಸಂಜೆ 7 ಗಂಟೆಗೆ ಗ್ರ್ಯಾಂಡ್ ಪ್ರೀಮಿಯರ್ ಸಂಚಿಕೆ ಪ್ರಸಾರವಾಗಲಿದ್ದು, ಈಗಾಗಲೇ ಶೂಟಿಂಗ್ ಹಂತ ಪೂರ್ಣಗೊಂಡು ಪ್ರಸಾರಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಕಿಚ್ಚ ಸುದೀಪ್ ವಾಡಿಕೆಯಂತೆ ನಿರೂಪಣೆಯ ಜವಾಬ್ದಾರಿ ಹೊರಲಿದ್ದು, ಈ ಬಾರಿಯ ಸೀಸನ್ ಹಲವು ಅಚ್ಚರಿಗಳಿಗೆ ಸಾಕ್ಷಿಯಾಗಲಿದೆ.

ಈ ಬಾರಿ ದಕ್ಷಿಣ ಭಾರತದ ಕಿರುತೆರೆ ಇತಿಹಾಸದಲ್ಲೇ ಮೊದಲ ಬಾರಿಗೆ ಅಪರೂಪದ ಕ್ಷಣವೊಂದು ಎದುರಾಗಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಬಿಗ್ ಬಾಸ್ ಶೋಗಳು ಏಕಕಾಲಕ್ಕೆ ಚಾಲನೆ ಪಡೆಯುತ್ತಿದ್ದು, 4 ಭಾಷೆಯ ಮಹಾನ್ ತಾರೆಯರಾದ ಕಿಚ್ಚ ಸುದೀಪ್, ನಾಗಾರ್ಜುನ, ವಿಜಯ್ ಸೇತುಪತಿ ಮತ್ತು ಮೋಹನ್ ಲಾಲ್ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ವೇದಿಕೆಯಲ್ಲಿ ದಕ್ಷಿಣ ಭಾರತದ ಈ ಸ್ಟಾರ್ ನಿರೂಪಕರು ಪರಸ್ಪರ ಸಂಭಾಷಣೆ ನಡೆಸಿದ್ದು, ತಮಿಳು ನಟ ವಿಜಯ್ ಸೇತುಪತಿ ಕನ್ನಡದಲ್ಲೇ ಮಾತನಾಡಿರುವುದು ವಿಶೇಷ ಆಕರ್ಷಣೆಯಾಗಿ ಮೂಡಿಬಂದಿದೆ. ಈ ಅಪರೂಪದ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಒಟ್ಟಾರೆಯಾಗಿ…ಪ್ರತಿ ಬಾರಿಗಿಂತ ಈ ಬಾರಿಯ ಬಿಗ್ ಬಾಸ್ ಸೀಸನ್ ವಿಭಿನ್ನವಾಗಿರಲಿದೆ. ಕೇವಲ ಪ್ರಸಿದ್ಧ ಸೆಲೆಬ್ರಿಟಿಗಳು ಮಾತ್ರವಲ್ಲದೆ, ಸಾಮಾನ್ಯ ಜನರಿಗೂ ಸಹ ಬಿಗ್ ಬಾಸ್ ಮನೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಈ ಬಾರಿಯ ಪೈಪೋಟಿ ಮತ್ತು ಮನರಂಜನೆ ಮತ್ತಷ್ಟು ರಂಗೇರಲಿದೆ.