ಸಿದ್ದರಾಮಯ್ಯಗೆ 60 ಲಕ್ಷ ರೂ. ಸೈಟು ಮಾರಿ 30 ಲಕ್ಷ ಕೊಟಿದ್ದೆ

0
15
ಇಬ್ರಾಹಿಂ

ಕೋಲಾರ: ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಚುನಾವಣೆ ಖರ್ಚಿಗಾಗಿ ಸಿದ್ದರಾಮಯ್ಯರಿಗಾಗಿ ನನ್ನ 60 ಲಕ್ಷ ರೂ. ಸೈಟು ಮಾರಿ 30 ಲಕ್ಷ ಅವರ ಕೈಗೆ ಕೊಟ್ಟಿದ್ದೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 30 ಸಾವಿರದಿಂದ ಗೆಲ್ತಿನಿ ಅಂತ ಸಿದ್ದರಾಮಯ್ಯ ಹೇಳಿದ್ರು ನಾನು ನಿಲ್ಲಬೇಡಿ ಅಂತ ಹೇಳಿದ್ದೇ. ಎಲೆಕ್ಷನ್‌ಗೆ 10 ದಿನ ಇರೋವಾಗಲೇ ನನ್ನ ಬಳಿ ಗೆಲ್ಲೋಲ್ಲ ಅಂತ ಹೇಳಿದ್ರು. ನಾನು ಸೋತುಬಿಡ್ತಿನಿ ಕಣಯ್ಯ ಎಲ್ರೂ ಒಂದಾಗಿದ್ದಾರೆ ಅಂತ ಹೇಳಿದ್ರು. ಧೈರ್ಯ ಬಿಡಬೇಡಿ ನಾವೆಲ್ಲಾ ಇದ್ದಿವಿ ಅಂತ ವಿಶ್ವಾಸ ನೀಡಿದ್ದೆ. ಅವತ್ತು ನಾನು ದೇವೇಗೌಡ್ರ ಮಾತು ಕೇಳಿದ್ರೆ ಇವತ್ತು ಸಿದ್ದರಾಮಯ್ಯ ಇರುತ್ತಿರಲಿಲ್ಲ. ಅದೇ ರೀತಿ ಬಾದಾಮಿ ಕ್ಷೇತ್ರದಲ್ಲೂ ಇಂತಹ ಇತಿಹಾಸ ಇದೆ ಈಗ ಹೇಳೋಕೆ ಆಗಲ್ಲ. ಮುಸ್ಲಿಂ ಸಮಾಜದವರು ಕಡಿಮೆ ಬಲ ಇರೋರು. ನಮ್ ಹತ್ರ ಹಣ ಇಲ್ಲಾ ಅದ್ರೆ ಸ್ವಾಭಿಮಾನ ಶಕ್ತಿ ಇದೆ. ಅದರಿಂದಲೇ ನಾಲ್ಕು ವರ್ಷದ MLC ಸ್ಥಾನವನ್ನ ಅವರ ಮುಖಕ್ಕೆ ಎಸೆದು ಬಂದೆ ಎಂದರು.

Previous articleಸಿದ್ದರಾಮಯ್ಯ ಎಲ್ಲಿಯೇ ಸ್ಪರ್ಧಿಸಿದರೂ ಸೋಲಿಸುತ್ತೇವೆ
Next articleಬಲಿ ಕೊಡಲು ಸಿದ್ದರಾಮಯ್ಯರನ್ನ ಕೋಲಾರಕ್ಕೆ ಕರೆದಿದ್ದಾರೆ