ಚಿನ್ನದ ಅಂಗಡಿಯಲ್ಲಿ 25 ಕೆಜಿ ಬೆಳ್ಳಿ ಕಳ್ಳತನ

0
20

ರಾಯಚೂರು: ಚಿನ್ನದ ಅಂಗಡಿಯಲ್ಲಿ 17 ಲಕ್ಷ ಮೌಲ್ಯದ ಸುಮಾರು 25 ಕೆಜಿ ಬೆಳ್ಳಿ ಕಳ್ಳತನವಾಗಿರುವ ಘಟನೆ ಬುಧವಾರ ಮಧ್ಯರಾತ್ರಿ ಘಟನೆ ನಗರದ ಸರಾಫ್ ಬಜಾರದ ಲಕ್ಕಿ ಜ್ಯುವೆಲರಿ ಅಂಗಡಿಯಲ್ಲಿ ನಡೆದಿದೆ.
ಗ್ಯಾಸ್ ಕಟರ್‌ನಿಂದ ಅಂಗಡಿಯ ಕೀಲು ಮುರಿದಿದ್ದಾರೆ. ಆದರೆ, ಕಳ್ಳರು ಚಿನ್ನ ಕಳ್ಳತನ ಮಾಡಲು ಯತ್ನಿಸಿ ವಿಫಲಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಶಾನದಳ ಹಾಗೂ ಬೆರಳಚ್ಚು ತಜ್ಞರು ತಪಾಸಣೆ ನಡೆಸಿದ್ದಾರೆ. ಸದರ್ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಸಿಪಿಐ ಕಟ್ಟಿಮನಿ ಅವರು ತಿಳಿಸಿದ್ದಾರೆ.

ಬೆಳ್ಳಿ ಕಳ್ಳತನ
Previous articleಸಕ್ರೆಬೈಲು ಆನೆಗಳಿಗಾಗಿ ಮುತಗಾ ರೈತರ ಕಬ್ಬು ಕಳವು
Next articleಕರ್ತವ್ಯ ಲೋಪ: ನಾಲ್ವರು ಅಮಾನತು