Home Advertisement
Home ಸುದ್ದಿ ವಿದೇಶ ಲಕ್ಷ ಜನರ ಗಮನ ಸೆಳೆದ ಆ ಒಂದು ಚುಕ್ಕೆ

ಲಕ್ಷ ಜನರ ಗಮನ ಸೆಳೆದ ಆ ಒಂದು ಚುಕ್ಕೆ

0
243

ಎಲೋನ್ ಮಸ್ಕ್ ಅವರು ತಡರಾತ್ರಿ ಮಾಡಿದ ಒಂದು ನಿಗೂಢವಾದ ಟ್ವೀಟ್ ಬಹುಬೇಗ ಜನರ ಗಮನ ಸೆಳೆಯಿತು, ಜನರು ಅದರ ಅರ್ಥವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ನೋಟಗಳನ್ನು ಕಂಡಿತ್ತು. ಇತ್ತಿಚಿನ ವರದಿಯ ಪ್ರಕಾರ ಆ ಟ್ವೀಟ್‌ 41 ಮಿಲಿಯನ್‌ views ಹಾಗೂ 15 ಸಾವಿರಕ್ಕೂ ಅಧಿಕ ಬಾರಿ Retweet ಆಗಿದೆ.
ಎಲೋನ್ ಮಸ್ಕ್ ಅವರು ಒಂದು ಚುಕ್ಕೆಯನ್ನು ಇಟ್ಟ ಸಂದೇಶವನ್ನು ಟ್ವೀಟ್‌ ಮಾಡಿದ್ದರು. ಹಲವರು ಮಸ್ಕ್ ಅವರ ಟ್ವೀಟ್‌ಗೆ ಚುಕ್ಕೆಯೊಂದಿಗೆ ಉತ್ತರಿಸಿದರೆ, ಇತರರು ಅವರ ಟ್ವೀಟ್‌ನ ಹಿಂದಿನ ಅರ್ಥವನ್ನು ಬಹಿರಂಗಪಡಿಸಲು ಪ್ರಯತ್ನಿಸಿದರು. ಅವರ ಟ್ವೀಟ್‌ನಂತೆ ಹಲವು ಬಗೆಯ ಕಮೆಂಟ್‌ಗಳನ್ನು ನೀಡಿದ್ದಾರೆ “ಇದು ಆರಂಭವೋ? ಇದು ಅಂತ್ಯವೋ?” , “ನಿಮಗೆ ಇಲ್ಲಿ ಒಂದು ಪಾಯಿಂಟ್ ಸಿಕ್ಕಿದೆ” ಎಂದು ಬಗೆ ಬಗೆಯ ಟ್ವೀಟ್‌ ಮಾಡಿದ್ದಾರೆ ಒಟ್ಟಿನಲ್ಲಿ ಆ ಒಂದು ಚುಕ್ಕೆ ಮಿಲಿಯನ್‌ ಮನಗಳನ್ನು ಆಕರ್ಷಿಸಿದೆ.