Home Advertisement
Home ಆಹಾರ ದಂ ಟೊಮ್ಯಾಟೊ ಭಾತ್

ದಂ ಟೊಮ್ಯಾಟೊ ಭಾತ್

0
469
ದಂ ಟೊಮ್ಯಾಟೊ ಭಾತ್

ಬೇಕಾಗುವ ಪದಾರ್ಥಗಳು: ೧ ಬಟ್ಟಲು ಊಟದ ಅಕ್ಕಿ, ೩ ಟೊಮ್ಯಾಟೊ, ಒಂದು ಬಟ್ಟಲು ಕಾಯಿಹಾಲು, ಒಂದು ಚಮಚ, ಅಚ್ಚ ಬ್ಯಾಡಗಿ ಖಾರದಪುಡಿ, ಅರ್ಧ ಚಮಚ ಅರಿಷಿಣ ಪುಡಿ, ಅರ್ಧ ಚಮಚ ಚಾಟ್ ಮಸಾಲಾ, ಧನಿಯಾ ಪುಡಿ ಅರ್ಧ ಚಮಚ, ಲವಂಗ ೨, ಚಕ್ಕೆ ಚಿಕ್ಕ ೪ ತುಂಡುಗಳು, ೧ ಪಲಾವ್ ಎಲೆ, ಎರಡು ಚಮಚ ಎಣ್ಣೆ, ೨ ಚಮಚ ತುಪ್ಪ, ರುಚಿಗೆ ಉಪ್ಪು, ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿದ್ದು, ೨ ಹಸಿಮೆಣಸಿನಕಾಯಿ ಸೀಳಿ ಹೆಚ್ಚಿದ್ದು.
ಮಾಡುವ ವಿಧಾನ: ಟೊಮ್ಯಾಟೊ ಮೊದಲು ಒಂದರಲ್ಲಿ ಎರಡು ಭಾಗ ಮಾಡಿ ರುಬ್ಬಿಟ್ಟುಕೊಳ್ಳಬೇಕು, ಕಾಯಿತುರಿ ಹಾಲನ್ನು ಒಂದು ಬಟ್ಟಲು ತೆಗೆದಿಟ್ಟುಕೊಳ್ಳಬೇಕು. ಎಣ್ಣೆ ತುಪ್ಪ ಕುಕ್ಕರಿಗೆ ಹಾಕಿ ಸಾಸಿವೆ, ಅರಿಷಿಣ, ಚಕ್ಕೆ, ಲವಂಗ ಹಾಕಿ ಟೊಮ್ಯಾಟೊ ರಸ, ಕಾಯಿಹಾಲು ಹಾಕಿ ತೊಳೆದ ನೀರಿಲ್ಲದಂತೆ ಬಸಿದು ಅಕ್ಕಿ ಹಾಕಿ ಚೆನ್ನಾಗಿ ಕೈಯಾಡಿಸಿ. ಇದಕ್ಕೆ ಉಪ್ಪು, ಖಾರದಪುಡಿ, ಧನಿಯಾಪುಡಿ, ಚಾಟ್ ಮಸಾಲಾ, ಸ್ವಲ್ಪ ಕಸೂರಿ ಮೆಂಥೆ ಪುಡಿ ಮಾಡಿ ಸೇರಿಸಿ. ಕುಕ್ಕರಿಗೆ ಅರ್ಧ ಲೋಟ ನೀರು ಬೆರಸಿ ಮೂರು ಕೂಗು ಕೂಗಿಸಿ ಆರಿದ ನಂತರ ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿಯಾದ ದಂ ಟೊಮ್ಯಾಟೊ ಭಾತ್ ತಯಾರಾಗುವದು.

– ಗಿರಿಜಾ ಎಸ್.ದೇಶಪಾಂಡೆ, ಬೆಂಗಳೂರು

ದಂ ಟೊಮ್ಯಾಟೊ ಭಾತ್
Previous articleಅವಲಕ್ಕಿ ರಾಗೀಹಿಟ್ಟಿನ ರೊಟ್ಟಿ
Next articleಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬೆಂಗಳೂರು- ಬೆಳಗಾವಿಗೆ ವಿಶೇಷ ರೈಲು