Home Advertisement
Home ಅಪರಾಧ ಹೆಂಡತಿಯ ಅಕ್ರಮ ಸಂಬಂಧ! ಅಣ್ಣನ ಬಲಿತೆಗೆದ ‘ಕಾಮ’ಕಾಂಡ; ಖ್ಯಾತ ಜ್ಯೋತಿಷಿ ಈಗ ಅಂದರ್!

ಹೆಂಡತಿಯ ಅಕ್ರಮ ಸಂಬಂಧ! ಅಣ್ಣನ ಬಲಿತೆಗೆದ ‘ಕಾಮ’ಕಾಂಡ; ಖ್ಯಾತ ಜ್ಯೋತಿಷಿ ಈಗ ಅಂದರ್!

0
72

ಅಧ್ಯಾತ್ಮದ ಮುಖವಾಡ ಹೊತ್ತು, ಭವಿಷ್ಯ ಹೇಳುತ್ತಾ ಫೇಮಸ್ ಆಗಿದ್ದ ಗುರೂಜಿಯೊಬ್ಬರ ಅಸಲಿ ಮುಖ ಈಗ ಬಯಲಾಗಿದೆ! ಪರಸ್ತ್ರೀ ಜೊತೆಗಿನ ಅಕ್ರಮ ಸಂಬಂಧದ ಅಮಲು ಒಬ್ಬ ಅಮಾಯಕನ ಪ್ರಾಣವನ್ನೇ ಬಲಿ ಪಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ನಡೆದ ಈ ‘ರಕ್ತಚರಿತ್ರೆ’ ಕೇಳಿದ್ರೆ ನೀವು ನಿಜಕ್ಕೂ ದಂಗಾಗ್ತೀರಾ.

ಹೌದು, ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಎಂಬ ಮಹಿಳೆಯ ಅಕ್ರಮ ಸಂಬಂಧ ಈಗ ಕೊಲೆಯಲ್ಲಿ ಅಂತ್ಯವಾಗಿದೆ, ಸಿದ್ದಾಪುರದ ಮಹೇಶ್ ನಾಯ್ಕ್ ಅವರ ಪತ್ನಿ ಸುಚಿತ್ರಾ, ಶಿವಮೊಗ್ಗದ ಜ್ಯೋತಿಷಿ ಕಮಲಾಕರ್ ಭಟ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಅಚ್ಚರಿಯ ವಿಷಯ ಅಂದ್ರೆ, ತಾಯಿಯ ಈ ಕರಾಳ ರಹಸ್ಯವನ್ನ ಮಗಳೇ ಪತ್ತೆ ಹಚ್ಚಿ ತಂದೆ ಮಹೇಶ್‌ಗೆ ತಿಳಿಸಿದ್ದಳು! ಈ ವಿಚಾರವಾಗಿ ಮಹೇಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದೇ ಈ ದೊಡ್ಡ ದುರಂತಕ್ಕೆ ಕಾರಣವಾಯ್ತು. ದೂರು ನೀಡಿದ ಗಂಡನನ್ನೇ ಮುಗಿಸಲು ಪತ್ನಿ ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ್ ಭಟ್ ಸ್ಕೆಚ್ ಹಾಕಿದ್ದರು.

ತಮ್ಮನನ್ನ ಉಳಿಸಲು ಹೋಗಿ ಅಣ್ಣನ ಸಾವು: ಸುಚಿತ್ರಾ ಮತ್ತು ಗುರೂಜಿ ಕಳುಹಿಸಿದ್ದ ಗ್ಯಾಂಗ್ ಏಕಾಏಕಿ ಮಹೇಶ್ ನಾಯ್ಕ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿತ್ತು. ಈ ವೇಳೆ ತಮ್ಮನ ಮೇಲೆ ಹಲ್ಲೆ ನಡೆಯುತ್ತಿರುವುದನ್ನ ಕಂಡ ಅಣ್ಣ ವಸಂತ್ ನಾಯ್ಕ್, ಪ್ರಾಣದ ಹಂಗು ತೊರೆದು ಕಾಪಾಡಲು ಓಡಿ ಬಂದಿದ್ದರು.

ಹಂತಕರ ಗುರಿ ಮಹೇಶ್ ಆಗಿದ್ದರೂ, ಅಡ್ಡ ಬಂದ ಅಣ್ಣ ವಸಂತ್ ನಾಯ್ಕ್‌ಗೆ ಬರ್ಬರವಾಗಿ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ವಸಂತ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ತಮ್ಮ ಬದುಕಿದರೂ, ಆತನನ್ನ ಉಳಿಸಲು ಬಂದ ಅಣ್ಣ ಮಾತ್ರ ಹೆಣವಾಗಿದ್ದ.

ಖಾಕಿ ಪಡೆಯ ಭೇಟೆ: ಕೃತ್ಯ ಎಸಗಿದ ಬಳಿಕ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಗ್ಯಾಂಗ್ ತಲೆಮರೆಸಿಕೊಳ್ಳಲು ಯತ್ನಿಸಿತ್ತು. ಆದರೆ ಸಿದ್ದಾಪುರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ, ಶಿವಮೊಗ್ಗದಲ್ಲಿ ಮೂವರು ಹಾಗೂ ಸಿದ್ದಾಪುರದಲ್ಲಿ ನಾಲ್ವರು ಸೇರಿದಂತೆ ಒಟ್ಟು 7 ಜನ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಪತ್ನಿ ಸುಚಿತ್ರಾ ಎ-1 ಆರೋಪಿಯಾದರೆ, ಜ್ಯೋತಿಷಿ ಕಮಲಾಕರ್ ಭವಿಷ್ಯ ಹೇಳುವ ಜ್ಯೋತಿಷಿಯೇ ಈ ರೀತಿ ಅನೈತಿಕ ಸಂಬಂಧಕ್ಕಾಗಿ ಕೊಲೆಗೆ ಸ್ಕೆಚ್ ಹಾಕಿರೋದು ಎಂತಹ ವಿಪರ್ಯಾಸ ಅಲ್ವಾ? ಇಂತಹ ‘ಕಾಮ’ಕಾಂಡಗಳಿಗೆ ಕೊನೆಯೆಂದು? ಈ ಘಟನೆಯ ಬಗ್ಗೆ ಮತ್ತು ಇಂತಹ ಗುರೂಜಿಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ ತಿಳಿಸಿ.

Previous articleಮಗಳ ರಕ್ಷಣೆಗೆ ಹೋದ ತಂದೆ ಮೇಲೆ ಹಲ್ಲೆ; ಅಣ್ಣನ ಬರ್ಬರ ಹತ್ಯೆ ಮಾಡಿದ ‘ಸ್ವಾಮೀಜಿ’ ಗ್ಯಾಂಗ್!