Home ಅಪರಾಧ ದೀಪಕ ಪಟದಾರಿ ಪತ್ನಿ ಆತ್ಮಹತ್ಯೆ

ದೀಪಕ ಪಟದಾರಿ ಪತ್ನಿ ಆತ್ಮಹತ್ಯೆ

0
116
sucide

ಹುಬ್ಬಳ್ಳಿ: ಕೆಲ ತಿಂಗಳ ಹಿಂದೆ ಹತ್ಯೆಯಾಗಿದ್ದ ತಾಲ್ಲೂಕಿನ ಗಂಗಿವಾಳ ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ಅವರ ಪತ್ನಿ ಪುಷ್ಪಾ(26) ಬುಧವಾರ ಸಂಜೆ ನವನಗರದ ಚವ್ಹಾಣ ಎಂಬುವರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ರಾಯನಾಳ ನಿವಾಸಿಯಾಗಿದ್ದ ದೀಪಕ ಪಟದಾರಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು.
ಈಚೆಗೆ ದೀಪಕ ಅವರ ಕೊಲೆ ನಡೆದ ವೇಳೆ ರಾಜಕೀಯ ವೈಷಮ್ಯದಿಂದ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ತಮ್ಮ ಕುಟುಂಬಕ್ಕೆ ಪೊಲೀಸರು ರಕ್ಷಣೆ ಕೊಡುತಿಲ್ಲ. ಆರೋಪಿಗಳಿಗೆ ಸ್ಥಳೀಯ ಪ್ರಭಾವಿ ರಾಜಕೀಯ ಮುಖಂಡರೊಬ್ಬರ ರಕ್ಷಣೆ ಇದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಮೂರು ದಿನಗಳ ಹಿಂದಷ್ಟೇ ತಮ್ಮ ಪತಿಯ ಕೊಲೆ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು. ಸ್ಥಳೀಯ ಪೊಲೀಸರ ಮೇಲೆ ತಮಗೆ ನಂಬಿಕೆ ಇಲ್ಲ. ಸಿಐಡಿಗೆ ತನಿಖೆಗೆ ಮೊರೆ ಹೋಗಿದ್ದೆವು. ಸಿಐಡಿಯವರು ತನಿಖೆ ಆರಂಭಿಸಿದ ಬಳಿಕ ತಮಗೆ, ತಮ್ಮ ಮೈದುನನಿಗೆ ಸಂಬಂಧಿಕರಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ. ತಕ್ಷಣ ಕ್ರಮ ಜರುಗಿಸಬೇಕು ಎಂದು ತಮ್ಮ ತಂದೆ, ತಮ್ಮ ಎರಡು ಮಕ್ಕಳು, ಮೈದುನನೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿ ಕಣ್ಣೀರಿಟ್ಟಿದ್ದರು.
ಆದರೆ, ಬುಧವಾರ ಸಂಜೆ ನವನಗರದ ಮನೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.