Home Advertisement
Home ಅಪರಾಧ ಅಕ್ರಮ ಸಂಬಂಧ: ಪ್ರೇಮಿಗಳು ಆತ್ಮಹತ್ಯೆ

ಅಕ್ರಮ ಸಂಬಂಧ: ಪ್ರೇಮಿಗಳು ಆತ್ಮಹತ್ಯೆ

0
140

ಕುಷ್ಟಗಿ: ಪ್ರೇಮಿಗಳಿಬ್ಬರು ವಿಷ ಸೇವಿಸಿ ಸಾವನ್ನಪ್ಪಿದ ಘಟನೆ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ನಡೆದಿದೆ. ಶಾರವ್ವ ಪೀರಸಾಬ್ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಪೀರಸಾಬ್ ಪತ್ನಿ ಗೊತ್ತಾಗಿ ಶಾರವ್ವ ಜೊತೆಗೆ ಗಲಾಟೆಯಾಗಿದ್ದು ಗ್ರಾಮದ ಹಿರಿಯರು ಬುಧುವಾರ ಸಮಸ್ಯೆಗೆ ಇತ್ಯರ್ಥಪಡಿಸೋಣ ಎಂದು ತಿಳಿ ಹೇಳಿದ್ದರು. ಆದರೆ ಇದ್ಯಾವುದನ್ನು ಲೆಕ್ಕಿಸದೆ ಮಂಗಳವಾರ ತಡರಾತ್ರಿ ಪೀರಸಾಬ್ ಮತ್ತು ಶಾರವ್ವ ಈ ಇಬ್ಬರು ಪ್ರೇಮಿಗಳು ಬೆಳೆಗೆ ಸಿಂಪಡಿಸುವ ಕ್ರಿಮಿ ನಾಶಕ ಔಷಧವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾರ್ಗದರ್ಶನದ ಮೇರೆಗೆ ಹನಮಸಾಗರ ಠಾಣೆಯ ಪಿಎಸೈ ಸುನಿಲ್ ಎಚ್ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.