Home Advertisement
Home ಆಹಾರ ಮನೆಯ ಮದ್ದು ಕಾಫಿಪುಡಿ: ಬಾಡಿ ಸ್ಕ್ರಬ್ ತಯಾರಿಸಿ, ಕೇವಲ 5 ನಿಮಿಷದಲ್ಲಿ ಬೆಳ್ಳನೆಯ ಚರ್ಮಕಾಂತಿ ಪಡೆಯಿರಿ..!

ಮನೆಯ ಮದ್ದು ಕಾಫಿಪುಡಿ: ಬಾಡಿ ಸ್ಕ್ರಬ್ ತಯಾರಿಸಿ, ಕೇವಲ 5 ನಿಮಿಷದಲ್ಲಿ ಬೆಳ್ಳನೆಯ ಚರ್ಮಕಾಂತಿ ಪಡೆಯಿರಿ..!

0
38

ಈಚೀನ ಮಾಲಿನ್ಯಭರಿತ ವಾತಾವರಣ ಮತ್ತು ಸೂರ್ಯನ ಅತಿಯಾದ ಶಾಖದಿಂದಾಗಿ ತ್ವಚೆಯು ಬೇಗನೆ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಹಾಗೇ ಜನರು ಅದರಲ್ಲಿಯೂ ಮಹಿಳೆಯರಿಗೆ ತಮ್ಮ ಚರ್ಮದ ಕಾಂತಿಯ ಬಗ್ಗೆ ಮತ್ತು ತಮ್ಮ ಸೌಂದರ್ಯದ ಕುರಿತು ಹೆಚ್ಚು ಆಸಕ್ತಿ ವಹಿಸುತ್ತಾರೆ. ಹೀಗಾಗಿ ಚರ್ಮವನ್ನ ರಕ್ಷಿಸರು ಆಕರ್ಷಿತವಾಗಿ ಕಾಣಲು ಏನೇಲ್ಲಾ ಸರ್ಕಸ್‌ಗಳನ್ನ ಮಾಡಿ ಸೋತು ಹೋಗುತ್ತಾರೆ.

ಅಷ್ಟೇ ಅಲ್ಲದೇ ಇನ್ನೂ ಮುಂದುವರೆದು, ಬೇರೆಯವರ ಸಲಹೆ ಮತ್ತು ಕಾನೂನು ಬಾಹಿರ ಪದಾರ್ಥಗಳನ್ನ ಬಳಸಿ ಸೌಂದರ್ಯವನ್ನ ಹಾಳು ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಸ್ಕ್ರಬ್‌ಗಳಿಗಿಂತ ಅಡುಗೆ ಮನೆಯಲ್ಲಿರುವ ಕಾಫಿ ಮತ್ತು ಸಕ್ಕರೆಯನ್ನು ಬಳಸಿ ತಯಾರಿಸುವ ‘ಹೋಮ್ ಮೇಡ್ ಬಾಡಿ ಸ್ಕ್ರಬ್’ ಚರ್ಮದ ಆರೋಗ್ಯಕ್ಕೆ ಹೆಚ್ಚು ಪರಿಣಾಮಕಾರಿ ಮತ್ತು ಉತ್ತಮವಾದದ್ದು.

ಸ್ಕ್ರಬ್ ತಯಾರಿಸಲು ಬೇಕಾಗುವ ಪದಾರ್ಥಗಳು:

  • ಕಾಫಿ ಪುಡಿ – 1 ದೊಡ್ಡ ಚಮಚ
  • ಸಕ್ಕರೆ – 1 ದೊಡ್ಡ ಚಮಚ (ಅತಿ ನುಣ್ಣಗಿರದ ಹರಳುಗಳು)
  • ಶುದ್ಧ ತೆಂಗಿನ ಎಣ್ಣೆ – 1 ಚಮಚ
  • ಬಾಡಿ ವಾಶ್ ಅಥವಾ ಜೇನುತುಪ್ಪ – 1 ಚಮಚ
  • ನಿಂಬೆ ಸಿಪ್ಪೆಯ ಪುಡಿ ಅಥವಾ ಕಿತ್ತಳೆ ಸಿಪ್ಪೆಯ ಪುಡಿ – ಅರ್ಧ ಚಮಚ

ತಯಾರಿಸುವ ವಿಧಾನ: ಒಂದು ಬೌಲ್‌ನಲ್ಲಿ ಸಕ್ಕರೆ ಮತ್ತು ಕಾಫಿ ಪುಡಿಯನ್ನು ಬೆರೆಸಿಕೊಳ್ಳಿ. ಇದಕ್ಕೆ ತೆಂಗಿನ ಎಣ್ಣೆ ಮತ್ತು ಬಾಡಿ ವಾಶ್ ಸೇರಿಸಿ ದಪ್ಪನೆಯ ಪೇಸ್ಟ್ ಮಾಡಿಕೊಳ್ಳಿ. ಸ್ನಾನದ ವೇಳೆ ಈ ಮಿಶ್ರಣವನ್ನು ದೇಹಕ್ಕೆ ಹಚ್ಚಿ 3-5 ನಿಮಿಷಗಳ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ ನಂತರ ನೀರಿನಿಂದ ತೊಳೆಯಿರಿ.

ಸ್ಕ್ರಬ್‌ನಿಂದ ಆಗುವ ಪ್ರಯೋಜನಗಳು:

  • ಸತ್ತ ಕೋಶಗಳ ನಿವಾರಣೆ (Exfoliation): ಸಕ್ಕರೆಯ ಹರಳುಗಳು ಚರ್ಮದ ಮೇಲಿರುವ ಸತ್ತ ಕೋಶಗಳನ್ನು ತೆಗೆದುಹಾಕಿ, ಚರ್ಮವನ್ನು ಮೃದುವಾಗಿಸುತ್ತದೆ.
  • ಟ್ಯಾನಿಂಗ್ ಮುಕ್ತಿ: ಕಾಫಿಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಬಿಸಿಲಿನಿಂದಾದ ಕಪ್ಪು ಕಲೆಗಳನ್ನು (Sun Tan) ನಿವಾರಿಸಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.
  • ನೈಸರ್ಗಿಕ ತೇವಾಂಶ: ತೆಂಗಿನ ಎಣ್ಣೆಯು ಚರ್ಮಕ್ಕೆ ಆಳವಾದ ತೇವಾಂಶ ನೀಡಿ, ಸ್ನಾನದ ನಂತರ ಚರ್ಮ ಒಣಗದಂತೆ ಕಾಪಾಡುತ್ತದೆ.
  • ಕಾಂತಿಯುತ ತ್ವಚೆ: ನಿಂಬೆ ಅಥವಾ ಕಿತ್ತಳೆ ಸಿಪ್ಪೆಯ ಪುಡಿಯು ನೈಸರ್ಗಿಕವಾಗಿ ಚರ್ಮಕ್ಕೆ ಬಿಳಿ ಬಣ್ಣ ಮತ್ತು ತಾಜಾತನವನ್ನು ನೀಡುತ್ತದೆ.

ಗಮನವಿರಲಿ!:
ಮುಖಕ್ಕೆ ಬಳಸಬೇಡಿ: ಸಕ್ಕರೆಯ ಹರಳುಗಳು ದೇಹದ ಚರ್ಮಕ್ಕೆ ಸೂಕ್ತವಾಗಿವೆ, ಆದ್ರೆ ಮುಖದ ಚರ್ಮವು ಬಹಳ ತೆಳುವಾಗಿರುವುದರಿಂದ ಸಕ್ಕರೆಯಿಂದ ಸಣ್ಣ ಗಾಯಗಳಾಗುವ ಅಪಾಯವಿರುತ್ತದೆ. ಮುಖಕ್ಕೆ ಬಳಸುವಾಗ ಕಾಫಿ ಪುಡಿಯೊಂದಿಗೆ ಸಕ್ಕರೆ ಬದಲಿಗೆ ಕಡಲೆ ಹಿಟ್ಟು ಬಳಸಿ.

ಅತಿಯಾದ ಬಳಕೆ ಬೇಡ: ವಾರಕ್ಕೆ ಕೇವಲ 1 ಅಥವಾ 2 ಬಾರಿ ಮಾತ್ರ ಸ್ಕ್ರಬ್ ಬಳಸಿ. ಪ್ರತಿದಿನ ಬಳಸುವುದರಿಂದ ಚರ್ಮದ ಮೇಲಿರುವ ರಕ್ಷಣಾತ್ಮಕ ಪದರಕ್ಕೆ ಹಾನಿಯಾಗಬಹುದು.

ಗಾಯಗಳಿದ್ದರೆ ದೂರವಿರಿ: ಚರ್ಮದ ಮೇಲೆ ಹಸಿ ಗಾಯ, ಅಲರ್ಜಿ ಅಥವಾ ಅತಿಯಾದ ಮೊಡವೆಗಳಿದ್ದರೆ ಸ್ಕ್ರಬ್ ಮಾಡಬೇಡಿ.

ಪ್ಯಾಚ್ ಟೆಸ್ಟ್: ಮೊದಲು ಕೈಯ ಒಂದು ಸಣ್ಣ ಭಾಗಕ್ಕೆ ಹಚ್ಚಿ ನೋಡಿ, ಉರಿ ಅಥವಾ ತುರಿಕೆ ಕಾಣಿಸಿಕೊಂಡರೆ ಬಳಸುವುದನ್ನು ನಿಲ್ಲಿಸಿ.

ಮನೆಯಲ್ಲಿಯೇ ತಯಾರಿಸಿದ ಈ ಸ್ಕ್ರಬ್ ಸಂಪೂರ್ಣ ನೈಸರ್ಗಿಕವಾಗಿದ್ದು, ರಾಸಾಯನಿಕಗಳ ಅಡ್ಡಪರಿಣಾಮವಿಲ್ಲದೆ ನಿಮ್ಮ ಚರ್ಮವನ್ನು ಮಗುಶೈಶವದಂತೆ ಮೃದುವಾಗಿಸುತ್ತದೆ. ಹಾಗೇ ಇದರಿಂದ ಅಥವಾ ನಿಮ್ಮ ಚರ್ಮದ ತ್ವಚೆಯು ಬಹಳ ಹಾಳಾಗಿದ್ದರೆ ಬೇಗನೆ ವೈದ್ಯರನ್ನ ಭೇಟಿ ಮಾಡಿ.