ರಾಂಚಿ: ಟೀಂ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿಯ ತವರು ನೆಲ ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳ ವಿರುದ್ಧ ಅಕ್ಷರಶಃ ರೌದ್ರಾವತಾರ ತಾಳಿದರು. ಕೇವಲ 102 ಎಸೆತಗಳಲ್ಲಿ ತಮ್ಮ 52ನೇ ಏಕದಿನ ಶತಕ ಸಿಡಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದರು.
ಈ ಶತಕದೊಂದಿಗೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಟೆಸ್ಟ್ ಮಾದರಿಯಲ್ಲಿ ನಿರ್ಮಿಸಿದ್ದ 51 ಶತಕಗಳ ದಾಖಲೆಯನ್ನು ಮುರಿದ ಕೊಹ್ಲಿ, ಒಂದೇ ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ವಿಶ್ವದ ಏಕೈಕ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.
ಒಂದೇ ಓವರ್‌ನಲ್ಲಿ 4, 6, 6, 4!: ಶತಕ ಪೂರೈಸಿದ ನಂತರವಂತೂ ವಿರಾಟ್ ಬ್ಯಾಟಿಂಗ್ ವೈಖರಿ ಸಂಪೂರ್ಣ ಬದಲಾಯಿತು. ಹರಿಣಗಳ ಪಡೆಯ ಸ್ಪಿನ್ನರ್ ಪ್ರೆನೆಲನ್ ಸುಬ್ರಯೇನ್ ಓವರ್‌ನಲ್ಲಿ ಕೊಹ್ಲಿ ಆರ್ಭಟ ಮುಗಿಲು ಮುಟ್ಟಿತ್ತು.
ಆ ಓವರ್‌ನ ಮೂರನೇ ಎಸೆತವನ್ನು ಫ್ಲಿಕ್ ಶಾಟ್ ಮೂಲಕ ಬೌಂಡರಿಗಟ್ಟಿದ ಕೊಹ್ಲಿ, ನಂತರದ ಎರಡು ಎಸೆತಗಳನ್ನು ಕೌ-ಕಾರ್ನರ್ ಮತ್ತು ಲಾಂಗ್-ಆನ್ ಕಡೆಗೆ ದೈತ್ಯ ಸಿಕ್ಸರ್‌ಗಳಾಗಿ ಪರಿವರ್ತಿಸಿದರು. ಅಷ್ಟಕ್ಕೆ ಸುಮ್ಮನಾಗದ ಅವರು, ಕೊನೆಯ ಎಸೆತವನ್ನು ಎಕ್ಸ್‌ಟ್ರಾ ಕವರ್ ಮೂಲಕ ಬೌಂಡರಿಗಟ್ಟುವ ಮೂಲಕ ಆ ಒಂದೇ ಓವರ್‌ನಲ್ಲಿ ಬರೋಬ್ಬರಿ 21 ರನ್ ಕೊಳ್ಳೆಹೊಡೆದರು.
ಈ ಓವರ್‌ನಲ್ಲಿ ವಿರಾಟ್ ಬ್ಯಾಟ್‌ನಿಂದ ಬಂದ (4, 6, 6, 4) ರನ್‌ಗಳ ಸುರಿಮಳೆ ಕಂಡು ರಾಂಚಿ ಮೈದಾನದಲ್ಲಿದ್ದ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ದೀರ್ಘಕಾಲದ ನಂತರ ಕೊಹ್ಲಿ ತಮ್ಮ ಹಳೆಯ ಆಕ್ರಮಣಕಾರಿ ಶೈಲಿಗೆ ಮರಳಿರುವುದು ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬಿದೆ.
























Exploring jiliaasia and so far, so good! Seems like they have a good selection of games. Hopefully, the payouts are decent. Fingers crossed! jiliaasia