ಬ್ರಿಸ್ಟೇನ್: ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಟಿ20 ಸರಣಿ ಇಂದು ಅಂತ್ಯವಾಗಲಿದೆ. ಇಂದು ನಡೆಯುವ ಟಿ20 ಸರಣಿಯ 5ನೇ ಹಾಗೂ ಅಂತಿಮ ಪಂದ್ಯದ ಮೂಲಕ ಈ ವರ್ಷ ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಪ್ರವಾಸಕ್ಕೆ ತೆರೆ ಬೀಳಲಿದ್ದು, ಅದಕ್ಕಿಂತ ಮುನ್ನ ಆಸ್ಟ್ರೇಲಿಯಾದಲ್ಲಿ ಭಾರತ ಸರಣಿ ಗೆಲ್ಲುತ್ತೋ ಅಥವಾ ಸಮಬಲ ಸಾಧಿಸಲಿದೆಯೇ ಎಂಬ ಕುತೂಹಲವಿದೆ.
ಈಗಾಗಲೇ ಸರಣಿಯಲ್ಲಿ 2ನೇ ಪಂದ್ಯದಲ್ಲೇ ಸೋಲುಂಡರೂ, ನಂತರ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಈಗ ಆತ್ಮವಿಶ್ವಾಸದಲ್ಲಿದೆ. ಆದರೆ, ಈಗಾಗಲೇ, ಕಳೆದ ವರ್ಷ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಹಾಗೂ ಕಳೆದ ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ ಈಗ ಸರಣಿ ಸೋಲಿನಿಂದ ಪಾರಾಗಬೇಕಾದರೆ, ಇಂದಿನ ಪಂದ್ಯ ಗೆಲ್ಲಲೇಬೇಕಿದೆ. ಒಮ್ಮೆ ಪಂದ್ಯ ರದ್ದಾದರೂ, ಸರಣಿ ಭಾರತದ ಪಾಲಾಗಲಿದೆ.
ಈ ಸರಣಿಯಲ್ಲಿ ಭಾರತದ ಬ್ಯಾಟರ್‌ಗಳಿಗಿಂತ ಸ್ಪಿನ್ ಬೌಲರ್‌ಗಳೇ ಹೆಚು ಪಭಾವ ಚ ಹೆಚ್ಚು ಪ್ರಭಾವ ಬೀರಿದ್ದು, ಇಂದಿನ ಪಂದ್ಯದಲ್ಲೂ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಸ್ಥಾನ ಅಭಾದಿತ. ಆದರೆ, ವರುಣ್ ಚಕ್ರವರ್ತಿಯ ಕೈ ಚಳಕ ಮತ್ತಷ್ಟು ಮೆರೆಯಬೇಕಿದ್ದು, ಒಮ್ಮೆ ಈ ಮೂವರು ಪರಿಣಾಮಕಾರಿ ಬೌಲಿಂಗ್ ಮಾಡಿದರೆ, ಖಂಡಿತ ಆಸ್ಟ್ರೇಲಿಯಾ ತಂಡವನ್ನು ಕಟ್ಟಿ ಹಾಕಬಹುದು.
ಬ್ಯಾಟರ್‌ಗಳದ್ದೇ ಚಿಂತೆ ಇನ್ನು ಭಾರತದ ಮೇಲ್ಪಂಕ್ತಿ ಬ್ಯಾಟರ್‌ಗಳು ಈ ಕಳೆದ 4 ಟಿ20 ಪಂದ್ಯಗಳಲ್ಲಿ ಅಷ್ಟೊಂದು ಗಮನಾರ್ಹವಾಗಿಲ್ಲ. ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ, ಶುಭಮನ್ ಗಿಲ್ ಕಳೆದ ಪಂದ್ಯದಲ್ಲಿ ಉತ್ತಮ ಆರಂಭ ಒದಗಿಸಿದರೂ, ದೊಡ್ಡ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಿಲ್ಲ. 46 ರನ್‌ಗಳಿಸಿದ ಗಿಲ್, ಆ ಮೊತ್ತವನ್ನು ಅರ್ಧಶತಕಕ್ಕೆ ಪರಿವರ್ತಿಸಲು ಸಾಧ್ಯವಾಗಲಿಲ್ಲ.
ಸೂರ್ಯ ಕುಮಾರ್ ಯಾದವ್ ಪದೇ ಪದೆ ಮಿಂಚಿ ಮರೆಯಾಗುತ್ತಿದ್ದಾರೆ. ತಿಲಕ್ ವರ್ಮಾ ಹಾಗೂ ಜಿತೇಶ್ ಶರ್ಮಾ ಕಳೆದ ಪಂದ್ಯದಲ್ಲಿ ಒಂದಂಕಿ ರನ್ ಗಳಿಸಿ ಔಟಾಗಿದ್ದರು. ಇದರಿಂದ, ಆಲ್‌ರೌಂಡರ್‌ಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಕ್ಲೀನ್ಸ್‌ಲ್ಯಾಂಡ್‌ನಲ್ಲಿ ಭಾರತದ ಸ್ಪಿನ್ ಅಸ್ತಗಳು ಆಸ್ಟ್ರೇಲಿಯಾ ತಂಡವನ್ನು ಕೇವಲ 119 ರನ್‌ಗಳಿಗೆ ಕಟ್ಟಿ ಹಾಕಿತ್ತು. ಇದು 2ನೇ ಕಡಿಮೆ ಮೊತ್ತ ಎಂದೂ ಕರೆಸಿಕೊಂಡಿತ್ತು.
ಆದರೆ, ಭಾರತದ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್ ಕೇವಲ ಒಂದೊಂದು ವಿಕೆಟ್‌ನಷ್ಟೇ ಪಡೆದಿದ್ದು ಹಾಗೂ ಅರೆಕಾಲಿಕ ಬೌಲರ್ ಶಿವಂ ದುಬೆ ದುಬಾರಿಯಾಗಿದ್ದನ್ನು ಇಲ್ಲಿ ಗಮನಿಸಬೇಕಿದೆ. ಹಾಗಾಗಿ, ಇಂದು ಭಾರತದ ಪಾಲಿಗೆ ಗೆಲುವು ನಿರೀಕ್ಷಿಸಿದಷ್ಟು ಸುಲಭವಂತೂ ಅಲ್ಲ.
ಆಸ್ಟ್ರೇಲಿಯಾ ತಂಡದಲ್ಲಿ ನಾಯಕ ಮಿಚೆಲ್ ಮಾರ್ಷ್ ಮಾತ್ರ ಸ್ಥಿರ ಪ್ರದರ್ಶನ ತೋರುತ್ತಿದ್ದು, ಉಳಿದವರಿಂದ ಹೇಳಿಕೊಳ್ಳುವಂತಹ ಆಟ ಮೂಡಿ ಬರುತ್ತಿಲ್ಲ. ಅದರಲ್ಲೂ ಈ ಟಿ20 ಸರಣಿಯಲ್ಲಿ ಕಳೆದ ಪಂದ್ಯವನ್ನು ಆಡಿದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಇಂದಿನ ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ತೋರುವರೋ ಅದರ ಮೇಲೆ ಆಸೀಸ್ ಭವಿಷ್ಯ ಅಡಗಿದೆ.
ಆಸ್ಟ್ರೇಲಿಯಾಗೆ ಸಿಗಲಿದೆಯೇ ಹ್ಯಾಟ್ರಿಕ್ ಸೋಲು: 2021ರಲ್ಲಿ ಆಸ್ಟ್ರೇಲಿಯಾ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್ ಸೋಲುಗಳನ್ನು ಕಂಡಿದೆ. ಅದಾದ ಬಳಿಕ ಮತ್ತೊಮ್ಮೆ ಈ ಹ್ಯಾಟ್ರಿಕ್ ಸೋಲು ಮರುಕಳಿಸುವ ಸಾಧ್ಯತೆಗಳಿವೆ.
ಅಷ್ಟೇ ಅಲ್ಲದೇ, ಭಾರತವೂ 2016ರ ನಂತರ ಆಸೀಸ್ ವಿರುದ್ಧ ಹ್ಯಾಟ್ರಿಕ್ ಗೆಲುವು ಕಂಡಿಲ್ಲ. 2018ರ ನಂತರ ಈ ಎರಡೂ ತಂಡಗಳು ಗಬ್ಬಾ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿದೆ.
100ನೇ ವಿಕೆಟ್‌ಗೆ ಇನ್ನೊಂದು ಹೆಜ್ಜೆ: ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ, ಇಂದಿನ ಪಂದ್ಯದಲ್ಲಿ ದಾಖಲೆ ಬರೆಯುವ ಸಾಧ್ಯತೆಗಳಿವೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬುಮ್ರಾ 100 ಟಿ20 ವಿಕೆಟ್‌ಗಳನ್ನು ಪಡೆಯಲು ಇನ್ನೊಂದು ವಿಕೆಟ್ ಅಷ್ಟೇ ಪಡೆಯಬೇಕಿದ್ದು, ಈ ಪಂದ್ಯದಲ್ಲಿ ಆ ಸಾಧನೆ ಮಾಡುವ ಸಾಧ್ಯತೆಗಳಿವೆ. ಅರ್ಶ್‌ದೀಪ್ ಸಿಂಗ್ ಈಗಾಗಲೇ 100 ಟಿ20 ವಿಕೆಟ್‌ಗಳನ್ನು ಪಡೆದ ಭಾರತೀಯ ಎನ್ನಿಸಿಕೊಂಡಿದ್ದಾರೆ.


























