ಟೋಕಿಯೋ: ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವಲಿನ್ ಫೈನಲ್‌ನಲ್ಲಿ ನಿರಾಶೆ ಮೂಡಿಸಿದರು. 5ನೇ ಎಸೆತದ ವೇಳೆ ಫೌಲ್ ಮಾಡುವ ಮೂಲಕ ಅವರು ಸ್ಪರ್ಧೆಯಿಂದ ಹೊರಬಿದ್ದು, ಈ ಮೂಲಕ 8ನೇ ಸ್ಥಾನಕ್ಕಷ್ಟೇ ಸೀಮಿತರಾದರು. ಅವರ ಅತ್ಯುತ್ತಮ ಎಸೆತ 84.03 ಮೀಟರ್ ಆಗಿತ್ತು.
ಉತ್ತರ ಪ್ರದೇಶದ ಯುವ ಪ್ರತಿಭೆ ಸಚಿನ್ ಯಾದವ್ ಭಾರತೀಯರ ಆಶಾಕಿರಣವಾಗಿ ಪರಿಣಮಿಸಿದ್ದಾರೆ. ಐದು ಎಸೆತಗಳ ಬಳಿಕ ಅವರು 85.96 ಮೀಟರ್ ದೂರ ಎಸೆದು 4ನೇ ಸ್ಥಾನದಲ್ಲಿದ್ದಾರೆ. ಅವರ ಹಿಂದಿನ ಎಸೆತಗಳು ಕ್ರಮವಾಗಿ 86.27 ಮೀ., 85.71 ಮೀ., 84.90 ಮೀ. ಆಗಿದ್ದು, ನಿರಂತರ ಉತ್ತಮ ಪ್ರದರ್ಶನ ನೀಡಿದರು. ಸಚಿನ್ ಯಾದವ್ ತಮ್ಮ ವೈಯಕ್ತಿಕ ಅತ್ಯುತ್ತಮ ಜಾವೆಲಿನ್ ಎಸೆತ 86.27 ಮೀಟರ್ ಸಾಧನೆ ಮಾಡಿ ನಾಲ್ಕನೇ ಸ್ಥಾನ ಪಡೆದರು
ಈ ನಡುವೆ ಪಾಕಿಸ್ತಾನದ ಅರ್ಶದ್ ನದೀಮ್ ಹಾಗೂ ಇತರ ಪ್ರಮುಖ ಆಟಗಾರರೂ ನಿರೀಕ್ಷಿತ ಮಟ್ಟದಲ್ಲಿ ಆಡಲು ವಿಫಲರಾದರು. ಪ್ಯಾಂಟಿಸ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅರ್ಷದ್ ನದೀಮ್ ತಮ್ಮ ಮೂರನೇ ಪ್ರಯತ್ನದಲ್ಲಿ 82.75 ಮೀಟರ್ ದೂರ ಎಸೆದು 10 ನೇ ಸ್ಥಾನ ಪಡೆದರು.
ಪದಕ ವಂಚಿತ ಸಚಿನ್: ಭಾರತೀಯ ಅಭಿಮಾನಿಗಳಿಗೆ ನೀರಜ್ ಅವರ ಫಲಿತಾಂಶ ನಿರಾಶೆ ತಂದಿದ್ದರೂ, ಸಚಿನ್ ಯಾದವ್ ಅವರ ಬಲಿಷ್ಠ ಪ್ರದರ್ಶನ ದೇಶಕ್ಕೆ ಹೊಸ ನಿರೀಕ್ಷೆಯನ್ನು ಮೂಡಿಸಿದ್ದರಾದರು. ಫೈನಲ್‌ನಲ್ಲಿ ಸಚಿನ್ ಯಾದವ್ ನಾಲ್ಕನೇ ಸ್ಥಾನ ಪಡೆದರು. ಅವರ ಅತ್ಯುತ್ತಮ ಎಸೆತ 86.27 ಮೀಟರ್ ಆಗಿದ್ದು, ಸ್ವಲ್ಪದರಲ್ಲೇ ಪದಕ ವಂಚಿತರಾದರು. ಇದು ಅವರ ವೈಯಕ್ತಿಕ ಅತ್ಯುತ್ತಮ ಎಸೆತವೂ ಆಗಿತ್ತು. ಕೆಶಾರ್ನ್ ವಾಲ್ಕಾಟ್, ಆಂಡರ್ಸನ್ ಪೀಟರ್ಸ್ ಮತ್ತು ಕರ್ಟಿಸ್ ಥಾಂಪ್ಸನ್ ಕ್ರಮವಾಗಿ ಪದಕಗಳನ್ನು ಗೆದ್ದರು..