ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌: ಮೀರಾಬಾಯಿ ಚಾನು ಸಾಧನೆ

0
61

ನಾರ್ವೆ, ಫೋರ್ಡ್: ಭಾರತದ ಪ್ರತಿಭಾವಂತ ವೇಟ್‌ ಲಿಫ್ಟರ್ ಮೀರಾಬಾಯಿ ಚಾನು ಮತ್ತೆ ಅಂತಾರಾಷ್ಟ್ರೀಯ ವೇದಿಕೆಯ ಮೇಲೆ ಕಮಾಲ್ ಮಾಡಿದ್ದಾರೆ. ನಾರ್ವೆಯ ಫೋರ್ಡ್‌ನಲ್ಲಿ ನಡೆಯುತ್ತಿರುವ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ನಲ್ಲಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಅವರು ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಇವರು ಮಹಿಳೆಯರ 48 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸದ್ದಾರೆ. ಸ್ನ್ಯಾಚ್ ವಿಭಾಗದಲ್ಲಿ 84 ಕೆಜಿ ಹಾಗೂ ಕ್ಲೀನ್ ಆಂಡ್ ಜರ್ಕ್: 115 ಕೆಜಿ ವೇಟ್‌ಲಿಫ್ಟಿಂಗ್ ಮಾಡುವ ಮೂಲಕ ಈ ಟೂರ್ನಿಯಲ್ಲಿ ಮೀರಾಬಾಯಿ ತಮ್ಮ ಮೂರನೇ ಪದಕವನ್ನು ಗೆದ್ದಿದ್ದಾರೆ.

2020ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಸಾಧನೆಯನ್ನು ಪಡೆದು ಕಾಮನ್‌ವೆಲ್ತ್‌ ಗೇಮ್ಸ್‌, ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ಗಳಲ್ಲಿ ಅಮೋಘ ಪ್ರದರ್ಶನ ನೀಡಿ ಪದಕದ ಬೇಟೆಯನ್ನು ನಡೆಸಿದ್ದರು. ಇವರ ಸಾಧನೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಪದ್ಮಶ್ರೀ ಹಾಗೂ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಖೇಲ್‌ ರತ್ನ ನೀಡಿ ಗೌರವಿಸಿದೆ.

Previous articleಬಿಜೆಪಿ-ಜೆಡಿಎಸ್ ಮೈತ್ರಿ: ದೇವೇಗೌಡರ ಮಹತ್ವದ ಘೋಷಣೆ
Next articleಯುವಿ ಭವಿಷ್ಯ ನಿಜವಾಯಿತು: ಟೀಂ ಇಂಡಿಯಾದ ಹೊಸ ಮ್ಯಾಚ್ ವಿನ್ನರ್ ಯಾರು?

LEAVE A REPLY

Please enter your comment!
Please enter your name here