ಐಪಿಎಲ್ ಆದಾಯಕ್ಕೆ ಕತ್ತರಿ: ಬಿಸಿಸಿಐಗೆ ಆಘಾತ, ಆರ್ಸಿಬಿಗೆ ಗರಿಮೆ!

0
13

ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆದಾಯದಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಬಿಸಿಸಿಐಗೆ ಆಘಾತ ಎದುರಾಗಿದೆ. ಕಳೆದ ಎರಡು ವರ್ಷಗಳಿಂದ ಐಪಿಎಲ್ ಇಕೋಸಿಸ್ಟಮ್ ಮೌಲ್ಯ ಇಳಿಮುಖವಾಗುತ್ತಿದ್ದು, 2024ರಲ್ಲಿ 82,700 ಕೋಟಿ ರೂ.ಗಳಿಂದ 76,100 ಕೋಟಿ ರೂ.ಗೆ ಕುಸಿದಿದೆ.

ಅಂದರೆ ಒಂದೇ ವರ್ಷದಲ್ಲಿ 6,600 ಕೋಟಿ ರೂ.ಗಳ ನಷ್ಟವಾಗಿದೆ. ಇದು ಕೇವಲ ಮೂರು ವರ್ಷಗಳಲ್ಲಿ ಶೇ 17.73ರಷ್ಟು ಕುಸಿತವನ್ನು ತೋರಿಸುತ್ತದೆ. ಆದರೆ, ಈ ಆರ್ಥಿಕ ಕುಸಿತದ ನಡುವೆಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡು ಅಗ್ರಸ್ಥಾನಕ್ಕೇರಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.

ಮೌಲ್ಯ ಕುಸಿತಕ್ಕೆ ಕಾರಣಗಳೇನು?: ಐಪಿಎಲ್ ಮೌಲ್ಯದ ಈ ದಿಢೀರ್ ಕುಸಿತಕ್ಕೆ ಹಲವು ಪ್ರಮುಖ ಕಾರಣಗಳನ್ನು D&P ಸಲಹಾ ಸಂಸ್ಥೆ ಮತ್ತು ಬಿಯಾಂಡ್ 22 ಯಾರ್ಡ್ಸ್‌ನ ವರದಿಗಳು ಗುರುತಿಸಿವೆ. ‘ಆನ್‌ಲೈನ್ ಗೇಮಿಂಗ್ ಬಿಲ್ 2025 ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ’ ಜಾರಿಗೆ ಬಂದಿರುವುದು ಒಂದು ಪ್ರಮುಖ ಅಂಶ. ಈ ಕಾಯ್ದೆಯಿಂದಾಗಿ ಆನ್‌ಲೈನ್ ಗೇಮಿಂಗ್ ಕಂಪನಿಗಳು ಐಪಿಎಲ್‌ಗೆ ನೀಡುತ್ತಿದ್ದ ಜಾಹೀರಾತು ಮತ್ತು ಪ್ರಾಯೋಜಕತ್ವದ ಆದಾಯದಲ್ಲಿ ಸುಮಾರು 1,500 ರಿಂದ 2,000 ಕೋಟಿ ರೂ.ಗಳ ನಷ್ಟವಾಗಿದೆ.

ಇತ್ತೀಚೆಗೆ ನಡೆದ ಜಿಯೋಸಿನಿಮಾ ಡಿಸ್ನಿ+ ಹಾಟ್‌ಸ್ಟಾರ್ ವಿಲೀನವೂ ಸಹ ಪ್ರಸಾರ ಮತ್ತು ಸ್ಟ್ರೀಮಿಂಗ್ ಹಕ್ಕುಗಳ ಹರಾಜಿನಲ್ಲಿ ಸ್ಪರ್ಧೆಯನ್ನು ಕಡಿಮೆ ಮಾಡಿದೆ. ಈ ಎರಡೂ ಅಂಶಗಳು ಸೇರಿ, ಕೇವಲ ಎರಡು ವರ್ಷಗಳಲ್ಲಿ ಐಪಿಎಲ್ ಇಕೋಸಿಸ್ಟಮ್ ಮೌಲ್ಯದಲ್ಲಿ 16,400 ಕೋಟಿ ರೂ.ಗಳ ಇಳಿಕೆಗೆ ಕಾರಣವಾಗಿವೆ. ಇದು ಐಪಿಎಲ್‌ನ ಬೆಳವಣಿಗೆಯ ಗ್ರಾಫ್‌ನಲ್ಲಿ ಅನಿರೀಕ್ಷಿತ ತಿರುವನ್ನು ಸೂಚಿಸುತ್ತದೆ.

ಆರ್‌ಸಿಬಿಗೆ ಹೊಸ ಕಿರೀಟ!; ಐಪಿಎಲ್ ಒಟ್ಟಾರೆ ಆದಾಯದಲ್ಲಿ ಕುಸಿತ ಕಂಡುಬಂದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 2024ರಲ್ಲಿ $227 ಮಿಲಿಯನ್‌ ಇದ್ದ ಆರ್‌ಸಿಬಿಯ ಮೌಲ್ಯ ಈಗ 269ಮಿಲಿಯನ್‌ಗೆಏರಿದೆ. ಈಮೂಲಕ ಆರ್‌ಸಿಬಿ ಐಪಿಎಲ್‌ನ ಅತ್ಯಂತಮೌಲ್ಯಯುತ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ. ಇದು ಮುಂಬೈಇಂಡಿಯನ್ಸ್ (269ಮಿಲಿಯನ್ಗೆಏರಿದೆ. ಈ ಮೂಲಕ ಆರ್ಸಿಬಿ ಐಪಿಎಲ್ನ ಅತ್ಯಂತ ಮೌಲ್ಯಯುತ ಫ್ರಾಂಚೈಸಿಯಾಗಿ ಹೊರಹೊಮ್ಮಿದೆ. ಇದುಮುಂಬೈಇಂಡಿಯನ್ಸ್ (242 ಮಿಲಿಯನ್) ಮತ್ತು ಚೆನ್ನೈ ಸೂಪರ್ ಕಿಂಗ್ಸ್ ($235 ಮಿಲಿಯನ್) ತಂಡಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲು ನೆರವಾಗಿದೆ. ಈ ಬಾರಿಯ ಚೊಚ್ಚಲ ಚಾಂಪಿಯನ್ ಪಟ್ಟವು ಆರ್‌ಸಿಬಿ ಬ್ರ್ಯಾಂಡ್‌ಗೆ ಹೊಸ ಆಯಾಮ ನೀಡಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯೂ ಸಹ ಬ್ರ್ಯಾಂಡ್ ಮೌಲ್ಯದಲ್ಲಿ ಶೇ 39.6ರಷ್ಟು ಗಮನಾರ್ಹ ಹೆಚ್ಚಳವನ್ನು ಕಂಡಿದೆ. ಅದರ ಮೌಲ್ಯ $141 ಮಿಲಿಯನ್‌ಗೆ ಏರಿದೆ. ಲಕ್ನೋ ಸೂಪರ್ ಜೈಂಟ್ಸ್ $122 ಮಿಲಿಯನ್ ಮೌಲ್ಯದೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಐಪಿಎಲ್ ತಂಡಗಳ ಹೊಸ ಬ್ರ್ಯಾಂಡ್ ಮೌಲ್ಯ (ಹೌಲಿಹಾನ್ ಲೋಕೆ ವರದಿ ಪ್ರಕಾರ):

  1. ರಾಯಲ್ ಚಾಲೆಂಜರ್ಸ್ ಬೆಂಗಳೂರು – $269 ಮಿಲಿಯನ್
  2. ಮುಂಬೈ ಇಂಡಿಯನ್ಸ್ – $242 ಮಿಲಿಯನ್
  3. ಚೆನ್ನೈ ಸೂಪರ್ ಕಿಂಗ್ಸ್ – $235 ಮಿಲಿಯನ್
  4. ಕೊಲ್ಕತ್ತಾ ನೈಟ್ ರೈಡರ್ಸ್ – $227 ಮಿಲಿಯನ್
  5. ಸನ್ರೈಸರ್ಸ್ ಹೈದರಾಬಾದ್ – $154 ಮಿಲಿಯನ್
  6. ಡೆಲ್ಲಿ ಕ್ಯಾಪಿಟಲ್ಸ್ – $152 ಮಿಲಿಯನ್
  7. ರಾಜಸ್ಥಾನ್ ರಾಯಲ್ಸ್ – $146 ಮಿಲಿಯನ್
  8. ಗುಜರಾತ್ ಟೈಟಾನ್ಸ್ – $142 ಮಿಲಿಯನ್
  9. ಪಂಜಾಬ್ ಕಿಂಗ್ಸ್ – $141 ಮಿಲಿಯನ್
  10. ಲಕ್ನೋ ಸೂಪರ್ ಜೈಂಟ್ಸ್ – $122 ಮಿಲಿಯನ್

ಐಪಿಎಲ್ ಇಕೋಸಿಸ್ಟಮ್ ದೊಡ್ಡ ಮಟ್ಟದ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದರೂ, ಕೆಲವು ಫ್ರಾಂಚೈಸಿಗಳು ತಮ್ಮ ಬ್ರ್ಯಾಂಡ್ ಮೌಲ್ಯವನ್ನು ಉಳಿಸಿಕೊಳ್ಳುವಲ್ಲಿ ಮತ್ತು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಇದು ಭವಿಷ್ಯದಲ್ಲಿ ಐಪಿಎಲ್ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ.

Previous articleಪಂಜಾಬ್‌: ಗರೀಬ್ ರಥ ಎಕ್ಸ್‌ಪ್ರೆಸ್‌ ರೈಲನಲ್ಲಿ ಬೆಂಕಿ
Next articleಸುಧಾಮೂರ್ತಿ ದಂಪತಿ ಮಾಹಿತಿ ಸೋರಿಕೆ: ಜಾತಿ ಸಮೀಕ್ಷೆ ವಿವಾದ

LEAVE A REPLY

Please enter your comment!
Please enter your name here