Home Advertisement
Home ಕ್ರೀಡೆ ಹೊಸ ಸಾಹಸ: ‘ಗರುಡ ಗ್ಲೈಡ್’ಗೆ ಚಾಲನೆ ನೀಡಿದ ಶ್ರೇಯಾಂಕ ಪಾಟೀಲ್

ಹೊಸ ಸಾಹಸ: ‘ಗರುಡ ಗ್ಲೈಡ್’ಗೆ ಚಾಲನೆ ನೀಡಿದ ಶ್ರೇಯಾಂಕ ಪಾಟೀಲ್

0
40

ಬೆಂಗಳೂರು: ನಗರದ ಪ್ರಸಿದ್ಧ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ (Wonderla) ನಲ್ಲಿ ಹೊಸದಾಗಿ ನಿರ್ಮಿಸಲಾದ ‘ಗರುಡ ಗ್ಲೈಡ್’ ರೋಲರ್ ಕೋಸ್ಟರ್ ರೈಡ್ ಶುಕ್ರವಾರ ಅದ್ಧೂರಿಯಾಗಿ ಉದ್ಘಾಟನೆಯಾಯಿತು. ಈ ಸಂದರ್ಭದಲ್ಲಿ ಭಾರತೀಯ ಮಹಿಳಾ ಕ್ರಿಕೆಟರ್ ಹಾಗೂ ಕನ್ನಡತಿ ಶ್ರೇಯಾಂಕ ಪಾಟೀಲ್ ಭೇಟಿ ನೀಡಿ, ಈ ರೋಚಕ ರೈಡ್ ಅನುಭವಿಸಿದರು.

ಥ್ರಿಲ್ ರೈಡ್‌ನಲ್ಲಿ ಶ್ರೇಯಾಂಕ ಸಂಭ್ರಮ: ತಮ್ಮ ಕೋಚ್ ಅರ್ಜುನ್ ಜೊತೆಗೂಡಿ ವಂಡರ್‌ಲಾಕ್ಕೆ ಭೇಟಿ ನೀಡಿದ ಶ್ರೇಯಾಂಕ ಪಾಟೀಲ್, ಗರುಡ ಗ್ಲೈಡ್ ರೈಡ್‌ನಲ್ಲಿ ಭಾಗವಹಿಸಿ ರೋಚಕ ಅನುಭವ ಪಡೆದರು. ಗಾಳಿಯಲ್ಲಿ ತೂಗಾಡುತ್ತಾ ವೇಗದಲ್ಲಿ ಸಾಗುವ ಈ ರೈಡ್ ಪ್ರವಾಸಿಗರಿಗೆ ವಿಭಿನ್ನ ಥ್ರಿಲ್ ಅನುಭವ ನೀಡಲಿದೆ.

ವಿಶೇಷತೆ : ವಂಡರ್‌ಲಾ ಈಗ ಎರಡು ಇನ್ವರ್ಷನ್ (ತಲೆಕೆಳಗಾಗುವ) ರೋಲರ್ ಕೋಸ್ಟರ್ ರೈಡ್‌ಗಳನ್ನು ಹೊಂದಿರುವ ‘ರಿಕಾಯಿಲ್’ ‘ಗರುಡ ಗ್ಲೈಡ್’ ಮೂಲಕ ಭಾರತದ ಏಕೈಕ ಅಮ್ಯೂಸ್‌ಮೆಂಟ್ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಉನ್ನತ ಮಟ್ಟದ ಸುರಕ್ಷತೆ: ಈ ಹೊಸ ರೈಡ್‌ನ ವಿನ್ಯಾಸ ಹಾಗೂ ಅಳವಡಿಕೆಯನ್ನು ವಂಡರ್‌ಲಾದ ಸ್ವಂತ ಇಂಜಿನಿಯರಿಂಗ್ ತಂಡವೇ ನಿರ್ವಹಿಸಿದೆ. ಜಾಗತಿಕ ಮಟ್ಟದ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಅದ್ಧೂರಿ ಉದ್ಘಾಟನಾ ಸಮಾರಂಭ: ಈ ಹೊಸ ರೈಡ್ ಉದ್ಘಾಟನೆಗಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಖ್ಯಾತ ಯೂಟ್ಯೂಬರ್ ಗಗನ್ ಶ್ರೀನಿವಾಸ್, ಕ್ರಿಕೆಟ್ ತಾರೆ ಶ್ರೇಯಾಂಕ ಪಾಟೀಲ್ ಇಬ್ಬರೂ ಸೇರಿ ‘ಗರುಡ ಗ್ಲೈಡ್’ ರೈಡ್‌ಗೆ ಚಾಲನೆ ನೀಡಿದರು.

ಪ್ರವಾಸೋದ್ಯಮಕ್ಕೆ ಉತ್ತೇಜನ: ಈ ಹೊಸ ರೈಡ್‌ನಿಂದ ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಹಾಗೂ ಯುವಕರಿಗೆ ಹೊಸ ಥ್ರಿಲ್ ಅನುಭವ ಸಿಗಲಿದೆ. ಕುಟುಂಬಗಳಿಗಾಗಿ ಆಕರ್ಷಕ ಮನರಂಜನೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.