IPL ಜಗತ್ತಿನಲ್ಲಿ ತಮ್ಮದೆಯಾದ ದೈತ್ಯ ಸಿಕ್ಸರ್‌ಗಳು ಮತ್ತು ವಿಧ್ವಂಸಕ ಬ್ಯಾಟಿಂಗ್ ಮೂಲಕ ‘ರಸೆಲ್ ಮಸಲ್’ ಎಂದೇ ಖ್ಯಾತಿಗಳಿಸಿದ್ದ ಆ್ಯಂಡ್ರೆ ರಸೆಲ್, ಇದೀಗ ಐಪಿಎಲ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.
ಆದರೆ, ಇದು ಅಂತ್ಯವಲ್ಲ, ಬದಲಿಗೆ ಹೊಸದೊಂದು ಆರಂಭ. ಹೌದು, ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಅಭಿಮಾನಿಗಳ ಪಾಲಿನ ಪ್ರೀತಿಯ ‘ದ್ರೆ ರಸ್’, ಇನ್ನು ಮುಂದೆ ಆಟಗಾರನಾಗಿ ಕಾಣಿಸಿಕೊಳ್ಳದಿದ್ದರೂ, ‘ಪವರ್ ಕೋಚ್’ ಆಗಿ ತಂಡದ ಜೊತೆಗಿರಲಿದ್ದಾರೆ.
ಕೆಕೆಆರ್ ಬಿಟ್ಟು ಬೇರೆಡೆ ಹೋಗಲ್ಲ!: ವೆಸ್ಟ್ ಇಂಡೀಸ್‌ನ ಈ ದೈತ್ಯ ಆಟಗಾರನಿಗೆ ಕೆಕೆಆರ್ ತಂಡವೆಂದರೆ ಎಲ್ಲಿಲ್ಲದ ಪ್ರೀತಿ. 2014ರಿಂದ ಈ ಫ್ರಾಂಚೈಸಿಯ ಅವಿಭಾಜ್ಯ ಅಂಗವಾಗಿದ್ದ ರಸೆಲ್ ಅವರನ್ನು, 2026ರ ಐಪಿಎಲ್ ಹರಾಜಿಗೂ ಮುನ್ನ ಕೆಕೆಆರ್ ಬಿಡುಗಡೆ ಮಾಡಿತ್ತು.
ಹರಾಜಿನಲ್ಲಿ ಬೇರೆ ತಂಡಗಳು ಅವರನ್ನು ಖರೀದಿಸುವ ಸಾಧ್ಯತೆಗಳಿದ್ದವು. ಆದರೆ, “ನನ್ನ ಹೃದಯದಲ್ಲಿ ಕೆಕೆಆರ್‌ಗೆ ಮಾತ್ರ ಸ್ಥಾನ, ಬೇರೆ ಯಾವುದೇ ಜೆರ್ಸಿ ಧರಿಸಿ ಐಪಿಎಲ್ ಆಡುವುದಿಲ್ಲ,” ಎಂದು ನಿರ್ಧರಿಸಿದ ರಸೆಲ್, ಆಟಗಾರನಾಗಿ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. “ನನ್ನ ಬೂಟುಗಳನ್ನು ಕಳಚುತ್ತಿದ್ದೇನೆ, ಆದರೆ ಕೆಕೆಆರ್ ಕುಟುಂಬದೊಂದಿಗಿನ ಸಂಬಂಧ ಮುಂದುವರಿಯಲಿದೆ,” ಎಂದು ಭಾವುಕರಾಗಿ ನುಡಿದಿದ್ದಾರೆ.
ಏನಿದು ‘ಪವರ್ ಕೋಚ್’ ಹುದ್ದೆ?: ಆಟಗಾರನಾಗಿ ನಿವೃತ್ತಿಯಾದ ಬೆನ್ನಲ್ಲೇ ಕೆಕೆಆರ್ ಮ್ಯಾನೇಜ್‌ಮೆಂಟ್ ರಸೆಲ್ ಅವರಿಗೆ ದೊಡ್ಡ ಉಡುಗೊರೆ ನೀಡಿದೆ. ಮುಂದಿನ ಸೀಸನ್‌ನಿಂದ ಅವರು ತಂಡದ ‘ಪವರ್ ಕೋಚ್’ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಪವರ್ ಹಿಟ್ಟಿಂಗ್ ಎಷ್ಟು ಮುಖ್ಯ ಎಂಬುದು ರಸೆಲ್‌ಗಿಂತ ಚೆನ್ನಾಗಿ ಮತ್ಯಾರಿಗೆ ಗೊತ್ತು? ತಮ್ಮ ಅನುಭವವನ್ನು ಯುವ ಆಟಗಾರರಿಗೆ ಧಾರೆ ಎರೆಯಲಿದ್ದಾರೆ. ವಿಶೇಷವೆಂದರೆ, ರಸೆಲ್ ಜಗತ್ತಿನ ಇತರೆ ಲೀಗ್‌ಗಳಲ್ಲಿ ಆಟಗಾರನಾಗಿ ಮುಂದುವರಿಯಲಿದ್ದಾರೆ, ಕೇವಲ ಐಪಿಎಲ್‌ನಲ್ಲಿ ಮಾತ್ರ ಬ್ಯಾಟ್ ಕೆಳಗಿಟ್ಟಿದ್ದಾರೆ.
ಐಪಿಎಲ್‌ನಲ್ಲಿ ರಸೆಲ್ ದರ್ಬಾರ್: 2012ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಮೂಲಕ ಐಪಿಎಲ್ ಪ್ರವೇಶಿಸಿದ ರಸೆಲ್, 2014ರಲ್ಲಿ ಕೆಕೆಆರ್ ಸೇರಿದ ಮೇಲೆ ತಮ್ಮ ಅಸಲಿ ಆಟ ಶುರು ಮಾಡಿದರು. ಕೆಕೆಆರ್ 2014 ಮತ್ತು 2024ರಲ್ಲಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ರಸೆಲ್ ಪಾತ್ರ ಮಹತ್ವದ್ದಾಗಿತ್ತು.
139 ಪಂದ್ಯಗಳನ್ನಾಡಿರುವ ಅವರು 174ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 2651 ರನ್ ಕಲೆಹಾಕಿದ್ದಾರೆ. ಇದರಲ್ಲಿ 12 ಅರ್ಧಶತಕಗಳು ಮತ್ತು ಅಸಂಖ್ಯಾತ ಸಿಕ್ಸರ್‌ಗಳಿವೆ. ಬೌಲಿಂಗ್‌ನಲ್ಲೂ ಕಮಾಲ್ ಮಾಡಿದ್ದ ರಸೆಲ್, 123 ವಿಕೆಟ್‌ಗಳನ್ನು ಕಬಳಿಸಿ ಒಬ್ಬ ಪರಿಪೂರ್ಣ ಆಲ್ರೌಂಡರ್ ಎನಿಸಿಕೊಂಡಿದ್ದರು.
























Bong365bong88, eh? I’ve thrown a few bets down there. Good selection of games. Payouts are generally pretty quick, which is always a plus. Check it out if you are looking for some action. bong365bong88