ಹೈವೊಲ್ಟೇಜ್‌ ಪಂದ್ಯಕ್ಕೆ ಕ್ಷಣಗಣನೆ

0
19

ಅಹಮದಾಬಾದ್‌: ಬಹು ನಿರೀಕ್ಷಿತ ಭಾರತ-ಪಾಕ್‌ ಹೈವೊಲ್ಟೇಜ್‌ ಪಂದ್ಯಕ್ಕೆ ಇನ್ನೆನು ಕ್ಷಣಗಣನೆ ನಡೆದಿದ್ದು, ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಪಂದ್ಯ ನೋಡಲು ಮುಂಜಾನೆಯಿಂದ ಜನಸ್ತೋಮ ಹರಿದುಬರುತ್ತಿದೆ. ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ. ಇಲ್ಲಿಯವರೆಗೆ ನಡೆದ ವಿಶ್ವಕಪ್‌ಗಳಲ್ಲಿ ಏಳು ಭಾರತ-ಪಾಕ್‌ ಪಂದ್ಯಗಳು ನಡೆದಿದ್ದು, ಎಲ್ಲ ಪಂದ್ಯಗಳನ್ನೂ ಗೆದ್ದ ದಾಖಲೆ ಟೀಂ ಇಂಡಿಯಾದ್ದಾಗಿದೆ. ಬಾರೀ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಪಡೆ ಹೊಂದಿರುವ ಟೀಂ ಇಂಡಿಯಾ ಇಲ್ಲಿಯೂ ಗೆಲ್ಲಲಿ ಎಂಬುದು ಕ್ರಿಕೆಟ್‌ ಅಭಿಮಾನಿಗಳ ಆಶಯವಾಗಿದೆ. ಆಲ್‌ ದಿ ಬೆಸ್ಟ್‌ ಟೀಂ ಇಂಡಿಯಾ……..

Previous articleಶ್ರೀರಂಗಪಟ್ಟಣ ‌ದಸರಾ ಸಕಲ ಸಿದ್ದತೆ: ಶಾಸಕ ಎ.ಬಿ.ರಮೇಶ್ ಬಂಡೀಸಿದ್ದೇಗೌಡ
Next articleಕಾವೇರಿ ಹೋರಾಟ: ಕಜ್ಜಾಯ ತಿಂದು ಪ್ರತಿಭಟನೆ