ಹಸಿರು ಜೆರ್ಸಿಯಲ್ಲಿ ಮೈದಾನಕ್ಕಿಳಿಯಲಿರುವ ಆರ್‌ಸಿಬಿ

0
18
ಹಸಿರು ತಂಡ

ಪ್ರತಿ ವರ್ಷದ ಸಂಪ್ರದಾಯದಂತೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂದು ಹಸಿರು ಜೆರ್ಸಿಯನ್ನು ತೊಟ್ಟು ರಾಜಸ್ಥಾನ ರಾಯಲ್ಸ್‌ ತಂಡದ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಾಡಲಿದೆ.
ಆದರೆ, ಪಂದ್ಯ ಆರಂಭಕ್ಕೂ ಮುನ್ನ ಆರ್‌ಸಿಬಿ ಅಭಿಮಾನಿಗಳಲ್ಲಿ ಸೋಲಿನ ಆತಂಕ ಮನೆ ಮಾಡಿದೆ. ಹೌದು ಆರ್​ಸಿಬಿ ಹುಡುಗರು ಹಸಿರು ಜೆರ್ಸಿ ತೊಟ್ಟು ಆಡಿದ ಪಂದ್ಯಗಳಲ್ಲಿ ಗೆದ್ದಿದ್ದಕ್ಕಿಂತ ಸೋತಿದ್ದೆ ಹೆಚ್ಚು. 2011ರಿಂದ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿರುವ ಆರ್​ಸಿಬಿ ಐಪಿಎಲ್‌ನಲ್ಲಿ ಒಟ್ಟು 11 ಪಂದ್ಯಗಳನ್ನು ಆಡಿದೆ. ಈ ಹನ್ನೊಂದು ಪಂದ್ಯಗಳಲ್ಲಿ ಆರ್‌ಸಿಬಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆದ್ದಿದ್ದು, 8 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ.
ಪರಿಸರ ಜಾಗೃತಿ ಮೂಡಿಸುವ ಕಾರಣದಿಂದ ಆರ್‌ಸಿಬಿ ತಂಡ 2011ರ ಐಪಿಎಲ್​ನಿಂದ ಆರ್​ಸಿಬಿ ಒಂದು ಪಂದ್ಯದಲ್ಲಿ ಗ್ರೀನ್ ಜೆರ್ಸಿ ತೊಟ್ಟು ಮೈದಾನಕ್ಕೆ ಇಳಿಯುತ್ತದೆ. ಅಲ್ಲದೇ ಈ ಜರ್ಸಿ ಶೇ.100 ರಷ್ಟು ಮರುಬಳಕೆಯ ವಸ್ತುಗಳಿಂದ ಮಾಡಲಾಗಿದೆ ಎಂದು ಆರ್‌ಸಿಬಿ ಫ್ರಾಂಚೈಸಿ ತಿಳಿಸಿದೆ.

ಪಂದ್ಯದ ಆರಂಭ: ಮಧ್ಯಾಹ್ನ 3-30 ರಿಂದ

Previous articleಲಿಂಗಾಯತ ಸಿಎಂ ಭ್ರಷ್ಟರು ಹೇಳಿಕೆಗೆ ಸಚಿವ ನಿರಾಣಿ ಟಾಂಗ್
Next articleಬಿಜೆಪಿ ಜಯ ನಿಶ್ಚಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ