ಬೆಂಗಳೂರು: ಸೋಲಿನಿಂದ ಕಲಿತ ಪಾಠಗಳು ನಿಮ್ಮ ಗೆಲುವಿನ ಹಾದಿಯ ಮೆಟ್ಟಿಲಾಗಲಿ ಎಂದು ಪ್ರಜ್ಞಾನಂದ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಹಾರೈಸಿದ್ದಾರೆ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು “ವಿಶ್ವಕಪ್ ಚೆಸ್ ಪಂದ್ಯಾಕೂಟದಲ್ಲಿ ಭಾರತದ ಯುವ ಪ್ರತಿಭೆ ಪ್ರಜ್ಞಾನಂದ ಅವರು ವಿರೋಚಿತ ಸೋಲು ಕಂಡರೂ ಅವರ ಸಾಧನೆ ನಮ್ಮೆಲ್ಲರ ಹೃದಯ ಗೆದ್ದಿದೆ. ಪಂದ್ಯದ ಕೊನೆಯ ಕ್ಷಣದವರೆಗೂ ಪ್ರಜ್ಞಾನಂದ ತೋರಿದ ಹೋರಾಟದ ಮನೋಭಾವ, ತಾಳ್ಮೆ, ಚಾಣಾಕ್ಷತನ ಮುಂಬರುವ ದಿನಗಳಲ್ಲಿ ಖಂಡಿತಾ ಯಶಸ್ಸು ತಂದು ಕೊಡಲಿದೆ. ಸೋಲಿನಿಂದ ಕಲಿತ ಪಾಠಗಳು ನಿಮ್ಮ ಗೆಲುವಿನ ಹಾದಿಯ ಮೆಟ್ಟಿಲಾಗಲಿ ಎಂದು ಹಾರೈಸುತ್ತೇನೆ.” ಎಂದಿದ್ದಾರೆ