ಭಾರತ ಕ್ರಿಕೆಟ್ ರಂಗದ ಹಿರಿಯ ಕ್ರೀಡಾಪಟು ಸಲೀಂ ಅಜೀಜ್ ದುರಾನಿ ಜಾಮ್‌ನಗರದಲ್ಲಿಂದು ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. 1960-1973ರಲ್ಲಿ ಭಾರತ ಕ್ರಿಕಟ್ ತಂಡದ ಆಟಗಾರರಾಗಿದ್ದರು. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರಿಕೆಟ್ ಪಟುಗಳು ಕಂಬನಿ ಮಿಡಿದಿದ್ದಾರೆ.
ಮೋದಿ ದುರಾನಿಯವರೊಂದಿಗೆ ಕಳೆದ ಕ್ಷಣಗಳ ಭಾವನಾತ್ಮಕ ಚಿತ್ರಗಳನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ದುರಾನಿ ಅವರು ಕ್ರಿಕೆಟ್‌ನ ದಂತಕಥೆ. ಕ್ರಿಕಟ್ ಜಗತ್ತಿನಲ್ಲಿ ಭಾರತ ಬೆಳೆಯಲು ಮಹತ್ವದ ಕೊಡುಗೆ ಕೊಟ್ಟಿದ್ದಾರೆ. ಅವರ ಸಾವು ನೋವು ತಂದಿದೆ. ಸಲೀಂ ಅವರ ಆತ್ಮ ಶಾಂತಿಯಲ್ಲಿ ನೆಲೆಸಲಿ ಎಂದು ಟ್ವೀಟ್ ಮಾಡಿದ್ದಾರೆ.