ಲಖನೌ-ಆರ್‌ಸಿಬಿ ಫೈಟ್ ಇಂದು

0
11
RCB

ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ೪೩ ನೇ ಲೀಗ್ ಪಂದ್ಯ ಇಂದು ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಲಿದೆ.
ಕೆ.ಎಲ್.ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡ, ತನ್ನ ಒಂಬತ್ತನೇ ಲೀಗ್ ಪಂದ್ಯ ಆಡಲು ಸಜ್ಜಾಗಿದೆ.ಈ ವರೆಗೆ ಆಡಿರುವ ಎಂಟು ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಜಯ ಹಾಗೂ ಮೂರು ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿರುವ ಲಖನೌ ಸೂಪರ್ ಜೈಂಟ್ಸ್ ತಂಡ ಒಟ್ಟು ಹತ್ತು ಅಂಕಣಗಳೊಂದಿಗೆ ಸಧ್ಯ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಇನ್ನೊಂದೆಡೆ ಫಾಫ್ ಡು ಫ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತನ್ನ ಒಂಬತ್ತನೇ ಲೀಗ್ ಪಂದ್ಯ ಆಡಲು ಸಿದ್ಧವಾಗಿದೆ. ಈ ವರೆಗೆ ಎಂಟು ಪಂದ್ಯಗಳ ಪೈಕಿ ನಾಲ್ಕು ಪಂದ್ಯಗಳಲ್ಲಿ ಜಯ ಹಾಗೂ ಅಷ್ಟೇ ಪಂದ್ಯಗಳಲ್ಲಿ ಸೋಲು ಕಂಡಿರುವ ಆರ್‌ಸಿಬಿ ತಂಡ ಎಂಟು ಅಂಕಗಳೊಂದಿಗೆ ಸಧ್ಯ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ನಾಯಕ ಕೆ.ಎಲ್.ರಾಹುಲ್ ಅಲ್ಲದೇ ಕೈಲ್ ಮೇಯರ್ಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಮಾರ್ಕಸ್ ಸ್ಟೋನಿಸ್ ಅವರ ಶ್ರೇಷ್ಠ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಉತ್ತಮ ಮೊತ್ತ ಸೇರಿಸುವಲ್ಲಿ ಪ್ರಮುಖ ಪಾತ್ರವನ್ನಾಡುತ್ತಿದ್ದಾರೆ. ವಿಶೇಷವಾಗಿ ಕೈಲ್ ಮೇಯರ್ಸ್ ತಮ್ಮ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಪ್ರತಿ ಪಂದ್ಯದಲ್ಲಿ ತಂಡದ ಬ್ಯಾಟಿಂಗ್ ಶಕ್ತಿಯಾಗಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನಾಡುತ್ತಿದ್ದಾರೆ. ರವಿ ಬಿಷ್ಣೋಯ್, ಮಾರ್ಕಸ್ ಸ್ಟೋನಿಸ್, ನವೀನ್ ಉಲ್ ಹಕ್, ಅವೇಶ್ ಖಾನ್, ಮಾರ್ಕ್ ವುಡ್, ಯಶ್ ಠಾಕೂರ್, ಲಖನೌ ತಂಡದ ಬೌಲಿಂಗ್ ಶಕ್ತಿ ಎನಿಸಿದ್ದಾರೆ.
ಇನ್ನೂಂದೆಡೆ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಪ್ರಸಕ್ತ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಗೆಲುವು ಸಾಧಿಸಬಹುದಿದ್ದ ಒಂದೆರಡು ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಒತ್ತಡಕ್ಕೆ ಸಿಲುಕಿದೆ. ತಂಡದ ಪ್ರಮುಖ ಬ್ಯಾಟ್ಸಮನ್ನರಾದ ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್ ಮಿಂಚಿದಲ್ಲಿ ಆರ್‌ಸಿಬಿ ಉತ್ತಮ ಮೊತ್ತ ಸೇರಿಸುವುದು ಕಷ್ಟವಾಗದು. ಇಲ್ಲವೇ ಎದುರಾಳಿ ತಂಡ ನೀಡುವ ಗುರಿಯನ್ನು ಮುಟ್ಟುವುದು ಸುಲಭವಾಗುವುದು.
ಎರಡೂ ತಂಡಗಳಲ್ಲಿ ಪ್ರತಿಭಾವಂತ ಆಟಗಾರರಿದ್ದು, ಉಭಯ ತಂಡಗಳ ನಡುವೆ ನಡೆಯಲಿರುವ ಸೆಣಸಾಟ ತೀವ್ರ ಪೈಪೋಟಿಯಿಂದ ಕೂಡಿ ರೋಚಕ ಅಂತ್ಯ ಕಾಣುವ ಸಾದ್ಯತೆಗಳನ್ನು ಅಲ್ಲಗಳೆಯಲಾಗದು.
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಅಮಿತ್ ಮಿಶ್ರಾ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ನವೀನ್ ಉಲ್ ಹಕ್, ಆಯುಷ್ ಬದೋನಿ, ಅವೇಶ್ ಖಾನ್, ಕರಣ್ ಶರ್ಮಾ, ಯಶ್ ಠಾಕೂರ್, ಮಾರ್ಕ್ ವುಡ್, ಸ್ವಪ್ನಿಲ್ ಸಿಂಗ್, ಮನನ್ ವೋಹ್ರಾ, ಡೇನಿಯಲ್ ಸಾಮ್ಸ್, ಕೃಷ್ಣಪ್ಪ ಗೌತಮ್, ಜಯದೇವ್ ಉನದ್ಕತ್, ಮಾರ್ಕಸ್ ಸ್ಟೋನಿಸ್, ರವಿ ಬಿಷ್ಣೋಯ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್ವೆಲ್, ಆಕಾಶ್ ದೀಪ್, ಫಿನ್ ಅಲೆನ್, ಅನುಜ್ ರಾವತ್, ಅವಿನಾಶ್ ಸಿಂಗ್, ಮನೋಜ್ ಭಾಂಡಗೆ, ಮೈಕಲ್ ಬ್ರೇಸ್‌ವೆಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಸಿದ್ದಾರ್ಥ್ ಕೌಲ್, ಮೊಹಮದ್ ಸಿರಾಜ್, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ವಿಜಯ್‌ಕುಮಾರ್ ವೈಶಾಕ್, ಡೇವಿಡ್ ವಿಲ್ಲಿ.

ಪಂದ್ಯದ ಆರಂಭ: ರಾತ್ರಿ ೭-೩೦ ರಿಂದ

Previous articleವಿಷಕನ್ಯೆಯೇ ಎಂದಿದ್ದೇನೆ ಯತ್ನಾಳ ಸಮರ್ಥನೆ
Next articleಕಾಂಗ್ರೆಸ್‌ನಲ್ಲಿ ಭಿನ್ನ ಮತ ಸ್ಫೋಟ: ತಟಸ್ಥವಾಗಿರಲು ನಿರ್ಧಾರ