ಹ್ಯಾಂಗ್‌ಝೌ: ಭಾರತ ಮಹಿಳಾ ಕ್ರಿಕೆಟ್ ತಂಡ ಏಷ್ಯನ್ ಗೇಮ್ಸ್‌ನ ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಹಂತ ತಲುಪಿದೆ.
ಇಲ್ಲಿನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಭಾರತ ತಂಡ, ಬಾಂಗ್ಲಾ ವನಿತೆಯರ ವಿರುದ್ಧ ಎಂಟು ವಿಕೆಟ್ ಭರ್ಜರಿ ಜಯ ದಾಖಲಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿತು.
ಗೆಲುವು ಸಾಧಿಸಲು ನಿಗದಿತ ೨೦ ಓವರ್‌ಗಳಲ್ಲಿ ೫೨ ರನ್ ಸೇರಿಸುವ ಗುರಿ ಪಡೆದ ಭಾರತ, ಇನ್ನೂ ೧೧.೪ ಓವರ್‌ಗಳು ಬಾಕಿ ಇರುವಂತೆ ೮.೨ ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು ಜಯದ ಗುರಿ ಮುಟ್ಟಿ, ಬಂಗಾರ ಇಲ್ಲವೇ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿತು. ಫೈನಲ್ ಪಂದ್ಯ ಸೋಮವಾರ ನಡೆಯಲಿದ್ದು, ಪ್ರಶಸ್ತಿಗಾಗಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಸೆಣಸಾಟ ನಡೆಸಲಿವೆ.


























