ಐಪಿಎಲ್‌: ಟಿಕೆಟ್‌ಗಾಗಿ ಮುಗಿಬಿದ್ದ ಅಭಿಮಾನಿಗಳು

RCB

ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ದಿನಗಣನೆ ಶುರುವಾಗಿದ್ದು, ಬೆಂಗಳೂರಿನಲ್ಲಿ ಟಿಕೆಟ್‌ಗಾಗಿ ಕ್ರಿಕೆಟ್‌ ಅಭಿಮಾನಿಗಳು ಮುಗಿಬಿದಿದ್ದಾರೆ.
ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಪಂದ್ಯಗಳ ಟಿಕೆಟ್‌ ಮಾರಾಟ ಇಂದಿನಿಂದ ಆರಂಭವಾಗಿದ್ದು, ಈ ಆವೃತ್ತಿಯ ತವರಿನ ಮೊದಲ ಪಂದ್ಯವನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಎಪ್ರಿಲ್‌ 2ರಂದು ಮತ್ತು ಲಕ್ನೋ ವಿರುದ್ಧ ಎಪ್ರಿಲ್‌ 10ರಂದು ಆಡಲಿದೆ. ಈ ಎರಡೂ ಪಂದ್ಯಗಳ ಟಿಕೆಟ್‌ಗಾಗಿ ಅಭಿಮಾನಿಗಳು ರಾತ್ರಿಯಿಂದಲೇ ಸಾಲುಗಟ್ಟಿ ನಿಂತಿದ್ದು, ಯಾವ ಪಂದ್ಯದ ಟಿಕೆಟ್‌ ಯಾವ ಗೇಟ್‌ನಲ್ಲಿ ದೊರೆಯುತ್ತದೆ ಎಂಬ ಗೊಂದಲವು ಉಂಟಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಆರ್‌ಸಿಬಿ ತಂಡದ ವೇಳಾಪಟ್ಟಿ
1) ಆರ್‌ಸಿಬಿ vs ಮುಂಬೈ ಇಂಡಿಯನ್ಸ್- ಏಪ್ರಿಲ್ 2
2) ಆರ್‌ಸಿಬಿ vs ಲಕ್ನೋ ಸೂಪರ್ ಜೈಂಟ್ಸ್ – ಏಪ್ರಿಲ್ 10
3) ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ – ಏಪ್ರಿಲ್ 15
4) ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್ – ಏಪ್ರಿಲ್ 17
5) ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್ – ಏಪ್ರಿಲ್ 23
6) ಆರ್‌ಸಿಬಿ vs ಕೋಲ್ಕತ್ತಾ ನೈಟ್ ರೈಡರ್ಸ್ – ಏಪ್ರಿಲ್ 26
7) ಆರ್‌ಸಿಬಿ vs ಗುಜರಾತ್ ಟೈಟನ್ಸ್ – ಮೇ 21

RCB