ಆರ್‌ಸಿಬಿಗೆ ಸರಳ ಹಾದಿ ಮಾಡಿದ ಸೂಪರ್‌ಜೈಂಟ್ಸ್

0
10

ಲಖನೌ: ಸವಾಲಿನ ಮೊತ್ತವನ್ನು ಚೇಸ್ ಮಾಡುವಲ್ಲಿ ಎಡವಿದ ಮುಂಬೈ ಇಂಡಿಯನ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸೋಲು ಕಂಡಿದೆ. ಮಂಗಳವಾರ ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಎಕನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ಕೇವಲ ೩ ವಿಕೆಟ್ ಕಳೆದುಕೊಂಡು ೧೭೭ ರನ್ ಪೇರಿಸಿತ್ತು.
ಪ್ರತಿಯಾಗಿ ಮುಂಬೈ ಇಂಡಿಯನ್ಸ್ ತಂಡ ರೋಚಕ ಹೋರಾಟ ತೋರಿತಾದರೂ ೫ ವಿಕೆಟ್‌ಗೆ ೧೭೨ ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಈ ಗೆಲುವಿನೊಂದಿಗೆ ಲಖನೌ ಸೂಪರ್ ಜೈಂಟ್ಸ್ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ೧೫ ಅಂಕ ಗಳಿಸಿದ್ದು ಪ್ಲೇ ಆಫ್‌ನ ಸನಿಹದಲ್ಲಿದೆ. ೧೮ ಅಂಕಗಳಿಸಿರುವ ಗುಜರಾತ್ ತಂಡದ ಪ್ಲೇ ಆಫ್ ಖಚಿತವಾಗಿದ್ದರೆ, ತಲಾ ೧೫ ಅಂಕ ಗಳಿಸಿರುವ ಚೆನೈ ಹಾಗೂ ಲಖನೌ ಪ್ಲೇ ಆಫ್ ರೇಸ್‌ನಲ್ಲಿವೆ. ಅದರೊಂದಿಗೆ ೧೪ ಅಂಕ ಗಳಿಸಿರುವ ಮುಂಬೈ, ೧೨ ಅಂಕ ಗಳಿಸಿರುವ ಆರ್‌ಸಿಬಿ, ರಾಜಸ್ಥಾನ, ಕೆಕೆಆರ್ ಹಾಗೂ ಪಂಜಾಬ್ ತಂಡಗಳಿಗೂ ಪ್ಲೇ ಆಫ್ ಅವಕಾಶ ಮುಕ್ತವಾಗಿದೆ. ಮುಂಬೈ, ಆರ್‌ಆರ್ ಮತ್ತು ಕೆಕೆಆರ್ ತಂಡಗಳಿಗೆ ಕೇವಲ ಒಂದು ಪಂದ್ಯ ಮಾತ್ರ ಬಾಕಿ ಇದ್ದರೆ, ಆರ್‌ಸಿಬಿ ಎರಡು ಪಂದ್ಯಗಳನ್ನಾಡಬೇಕಿದೆ.

Previous articleಆರ್‌ಸಿಬಿಗೆ ಮಾಡು ಇಲ್ಲವೇ ಮಡಿ
Next articleಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಂ ಸಮ್ಮತಿ