೧೫ ಅಡಿ ಉದ್ದದ ಕಾಳಿಂಗಸರ್ಪ ಸೆರೆ

0
26

ಬೆಂಗಳೂರು: ಖ್ಯಾತ ಉರಗತಜ್ಞ ಡಾ. ಗೌರಿಶಂಕರ್ ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ನಡಪಾಲ್ ಗ್ರಾಮದಲ್ಲಿ ೧೫ ಅಡಿ ಉದ್ದದ ಕಾಳಿಂಗಸರ್ಪವನ್ನು ಸೆರೆಹಿಡಿದಿದ್ದಾರೆ. ಆಗ್ನೇಯ ಏಷ್ಯಾ ಉಪಜೀವಿಗಳಾದ ಕಾಳಿಂಗ ಸರ್ಪ ಭಾರತದಲ್ಲಿ ಅತಿಹೆಚ್ಚು ಉದ್ದವೆಂದರೆ ೧೫ ಅಡಿ ಬೆಳೆಯುತ್ತದೆ. ಆದರೆ ಥೈಲ್ಯಾಂಡ್‌ನಲ್ಲಿ ೧೮ ಅಡಿಯವರೆಗೂ ಬೆಳೆಯುತ್ತದೆ. ಕಾಳಿಂಗಸರ್ಪಗಳ ಬಗ್ಗೆ ಡಾಕ್ಟರೇಟ್ ಪಡೆದಿರುವ ಗೌರಿಶಂಕರ್, ನಡಪಾಲ್‌ನ ಭಾಸ್ಕರ್ ಶೆಟ್ಟರ ಮನೆಯಲ್ಲಿ ಸೆರೆಹಿಡಿದ ಕಾಳಿಂಗ ಸರ್ಪ ೧೫ ಅಡಿ ಉದ್ದ ಮತ್ತು ೧೨.೫೦ ಕೆ.ಜಿ ತೂಕವಿದೆ. ಕಳೆದ ೨೦ ವರ್ಷಗಳಲ್ಲೇ ತಾವು ಹಿಡಿದ ದಾಖಲೆಯ ಅತಿ ಉದ್ದದ ಮತ್ತು ತೂಕದ ಕಾಳಿಂಗ ಸರ್ಪ ಎಂದು ಹೇಳಿದ್ದಾರೆ.

Previous articleಸಂಯುಕ್ತ ಕರ್ನಾಟಕದ ಯುಗಾದಿ ವಿಶೇಷಾಂಕ ಬಿಡುಗಡೆ
Next articleಆರ್‌ಸಿಬಿಗೆ ಲಖನೌ ಸವಾಲು