ಹೋಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದ ಕಾರ್ಯಕರ್ತರ ಬಂಧನ

0
37

ಚಿಕ್ಕಮಗಳೂರು: ಶ್ರೀ ದತ್ತಪೀಠದಲ್ಲಿ ರಾಮ ತಾರಕ ಹೋಮಕ್ಕೆ ಅವಕಾಶ ನೀಡದ ಜಿಲ್ಲಾಡಳಿತದ ಕ್ರಮ ಖಂಡಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಹೋಮ ನಡೆಸಿದ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದರು.
ಕಚೇರಿ ಎದುರು ರಾಮನ ಭಾವಚಿತ್ರ ಇಟ್ಟು ರಾಮ ಜಪ ಮಾಡಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕಾರ್ಯಕರ್ತರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಲಾಗಿದೆ.
ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಬಳಿ ಇರುವ ಹೋಮ ಮಂಟಪಕ್ಕೆ ಜಿಲ್ಲಾಡಳಿತದಿಂದ ಬೀಗ ಹಾಕಲಾಗಿತ್ತು. ಹೋಮ ಕಾರ್ಯಕ್ಕೆ ನಿರ್ಬಂಧ ‌ವಿಧಿಸಲಾಗಿತ್ತು.

Previous articleರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನೇರಪ್ರಸಾರ ವೀಕ್ಷಿಸಿದ ಶಾ
Next articleಭಾವೈಕ್ಯತೆಗೆ ಸಾಕ್ಷಿಯಾದ ಶೋಭಾಯಾತ್ರೆ