ಹೈದ್ರಾಬಾದನಿಂದ ಹಾರಿದ್ದು ಹುಮನಾಬಾದ್‌ನಲ್ಲಿ ಪತ್ತೆ: ಗ್ರಾಮಸ್ಥರಲ್ಲಿ ಆತಂಕ

ಹೈದ್ರಾಬಾದನಿಂದ ಹಾರಿ ಜಲಸಂಗವಿಯಲ್ಲಿ ಬಿದ್ದ ಹವಾಮಾನ ಪರಿಶೀಲನಾ ಟಿ.ಐ.ಎಫ್ಏ.ಆರ್ ಏರ್ ಬಲೂನ್

ಹುಮನಾಬಾದ್(ಬೀದರ್ ಜಿಲ್ಲೆ): ತೆಲಂಗಾಣ ಹೈದ್ರಾಬಾದನಿಂದ ಹವಾಮಾನ ಪರಿಶೀಲನೆಗಾಗಿ ಜ.17ರಂದು ಹಾರಿಬಿಟ್ಟ ಟಿ.ಐ.ಎಫ್.ಆರ್ ಏರ್ ಬಲೂನ್ ಶನಿವಾರ ಬೆಳಿಗ್ಗೆ 7ಕ್ಕೆ ತಾಲ್ಲೂಕಿನ ಜಲಸಂಗವಿಯಲ್ಲಿ ಬಿದ್ದು ಗ್ರಾಮಸ್ಥರ ಆತಂಕ ಸೃಷ್ಟಿಸಿತು.
ಏರ್ ಬಲೂನ್ ಹಾರಿಸಿಬಿಟ್ಟ ಹೈದ್ರಾಬಾದ್ ತಂಡ ಬಲೂನನ್ನು ಹಿಂಬಾಲಿಸಿಕೊಂಡು ಬರುತಿತ್ತು. ವಿಷಯ ತಿಳಿಯುತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿನೀಡಿ, ಪರಿಶೀಲನೆ ನಡೆಸಿ, ಅದರ ಸಾಧಕ ಬಾಧಕಗಳ ಕುರಿತು ದೂರವಾಣಿ ಮೂಲಕ ಮಾಹಿತಿ ಕಲೆಹಾಕಿ ಹೀಗೆ ಬೀಳುವುದರಿಂದ ಯಾವುದೇ ಅಪಾಯ ಆಗುವುದಿಲ್ಲ. ಯಾರೂ ಭಯಪಡಬೇಕಾದ ಅಗತ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಅಭಯ ನೀಡಿದ ನಂತರ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರುಬಿಟ್ಟು ಸಹಜ ಸ್ಥಿತಿಗೆ ಬಂದರು. ಬಳಿಕ ಪೊಲೀಸರು. ಬಲೂನ್ ವಶಕ್ಕೆ ತೆಗೆದುಕೊಂಡರು.