ಹೇಮಾವತಿ ಎಕ್ಸ್ಪ್ರೆಸ್ ಲಿಂಕ್‌ಕೆನಾಲ್ ಕಾಮಗಾರಿ: ಟೆಕ್ನಿಕಲ್ ಟೀಮ್ ವರದಿ ಆಧಾರದ ಮೇಲೆ ತೀರ್ಮಾನ

0
15

ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್‌ಕೆನಾಲ್ ಕಾಮಗಾರಿ ಪ್ರಾರಂಭದ ಬಗ್ಗೆ ಟೆಕ್ನಿಕಲ್ ಟೀಮ್ ವರದಿ ಆಧಾರದ ಮೇಲೆ ತೀರ್ಮಾನ ಮಾಡಲಾಗುವುದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಲಿಂಕ್‌ಕೆನಾಲ್ ಕಾಮಗಾರಿ ಸರ್ಕಾರದ ತೀರ್ಮಾನ ಕ್ಯಾಬಿನೇಟ್‌ನಲ್ಲಿ ಆದ ತೀರ್ಮಾನವಾಗಿದೆ. ಅದಕ್ಕೆ ಟೆಕ್ನಿಕಲಿ ಕೆಲವು ಸಂಶಯಗಳನ್ನು ವಿರೋಧ ಪಕ್ಷಗಳು ಹೇಳುತ್ತಿದ್ದು ಅದಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಉತ್ತರ ಕೊಟ್ಟಿದ್ದಾರೆ ಎಂದರು. ಲಿಂಕ್‌ಕೆನಾಲ್ ಕಾಮಗಾರಿ ಬಗ್ಗೆ ಕಮಿಟಿ ಮಾಡಿ ಎಂದು ಶಾಸಕರಾದ ಸುರೇಶ್‌ಗೌಡ, ಕೃಷ್ಣಪ್ಪ, ಸುರೇಶ್ ಬಾಬು ಇತರರು ಕೇಳಿಕೊಂಡಿದ್ದರು. ಅದರಂತೆ ಕಮಿಟಿ ರಚನೆ ಮಾಡಲಾಗಿತ್ತು. ಟೆಕ್ನಿಕಲ್ ಕಮಿಟಿ ವರದಿ ನೀಡಿದ ನಂತರ ಅದರ ಆಧಾರದ ಮೇಲೆ ತೀರ್ಮಾನ ಮಾಡಲಾಗುತ್ತದೆ. ವರದಿ ಆಧಾರದ ಮೇಲೆ ಎಲ್ಲವೂ ಸರಿಯಾಗುತ್ತದೆ ಎಂದು ಮಂತ್ರಿಗಳೇ ಹೇಳಿದ್ದಾರೆ. ಯಾವುದೇ ರೀತಿ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ. ಅರದಲ್ಲಿ ನಾಲೆ ಉನ್ನತೀಕರಣ ಕೂಡ ಸೇರಿದೆ. ಹಾಗಾಗಿ, ಸಹಕರಿಸಬೇಕು ಎಂದು ನಾನು ಮನವಿ ಮಾಡುತ್ತೇನೆ. ಲಾ ಅಂಡ್ ಆರ್ಡರ್‌ನಂತಹ ಸನ್ನಿವೇಶ ಬಂದಾಗ ಅವರ ಕೆಲಸವನ್ನು ಅವರು ಮಾಡುತ್ತಾರೆ. ಪೊಲೀಸರ ಕೆಲಸವೇ ಅದು ಲಾ ಅಂಡ್ ಆರ್ಡರ್ ನಿರ್ವಹಿಸುವುದು ಎಂದರು. ಜಿಲ್ಲೆಯಲ್ಲಿ ಏರ್‌ಪೋರ್ಟ್ ವಿಚಾರ ಸಂಬಂಧ ಮಾತನಾಡಿ, ನಮ್ಮಲ್ಲಿ ಮೂರು ಸಾವಿರ ಎಕರೆ ಪ್ರದೇಶ ಗುರ್ತಿಸಿ, ಏರ್ ಸರ್ವೇ ಅಂತಾ ಮಾಡಿದ್ದಾರೆ. ಅದಕ್ಕೆ ಇನ್ನು ಎಷ್ಟು ದೂರ ಹೋಗಬೇಕು. ತೀರ್ಮಾನ ಇಲ್ಲಿ ಆಗಬೇಕು. ದೆಹಲಿಯಲ್ಲಿ ತೀರ್ಮಾನ ಆಗಬೇಕು. ಸರ್ಕಾರ ಪ್ರಸ್ತಾವನೆ ಕೊಡಬೇಕು. ಅದಕ್ಕೆ ತುಂಬಾನೇ ನಿಯಮಗಳಿವೆ. ಏರ್‌ಪೋರ್ಟ್ ಆಗುವ ಸಾಧ್ಯತೆ ಇದೆ. ಅದನ್ನೇನು ತೆಗೆದು ಹಾಕುವಂತ್ತಿಲ್ಲ ಎಂದರು.

Previous articleಮಧುಗಿರಿಯಲ್ಲಿಯೂ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ
Next articleರಾತ್ರಿ ಮಣ್ಣಲ್ಲಿ ಹೂತಿದ್ದ ಮಗು ಬೆಳಿಗ್ಗೆ ಜೋಕಾಲಿಯಲ್ಲಿ ಪತ್ತೆ