ಹೆಲ್ಮೆಟ್ ಜಾಗೃತಿಯೊಂದಿಗೆ ಮತದಾನದ ಅರಿವು ಮೂಡಿಸಿದ ದಾವಣಗೆರೆ ಎಸ್ಪಿ

0
8

ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಮತದಾನದ ಜಾಗೃತಿ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸಿ ಪ್ರಾಣ ರಕ್ಷಿಸಿಕೊಳ್ಳಿ ಎಂದು ಬೈಕ್ ಸವಾರರಲ್ಲಿ ಜಾಗೃತಿ ಮೂಡಿಸಿದರು.
ನಗರದ ಹದಡಿ ರಸ್ತೆಯಲ್ಲಿರುವ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಹಿಂಭಾಗದ ನೀರಾವರಿ ಇಲಾಖೆ ಸಮೀಪ ಹೆಲ್ಮೆಟ್ ಧರಿಸದೆ ಬೈಕ್ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಸನ್ನಿವೇಶ ಹೊಂದಿದ ಪ್ರಾತ್ಯಕ್ಷಿಕೆ ಮೂಲಕ ಹೆಲ್ಮೆಟ್ ಜಾಗೃತಿ ಮಾಡುವ ಜೊತೆಗೆ ಮತದಾನ ಮಾಡಿ ನಿಮ್ಮ ಹಕ್ಜು ಚಲಾಯಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

Previous articleಆಸ್ತಮಾ-ಹೆದರದಿರಿ, ವೈದ್ಯರ ಸಲಹೆ ಪಾಲಿಸಿ
Next articleದಾವಣಗೆರೆ ಲೋಕಸಭಾ ಕ್ಷೇತ್ರ ಮತದಾನ ಪ್ರಮಾಣ 1ಗಂಟೆಗೆ