Home Advertisement
Home ಕೃಷಿ/ವಾಣಿಜ್ಯ ಹೂಡಿಕೆ ಹೆಚ್ಚಿಸಲು ಉಮಾ ತಂತ್ರಾಂಶ

ಹೂಡಿಕೆ ಹೆಚ್ಚಿಸಲು ಉಮಾ ತಂತ್ರಾಂಶ

0
123

ಮೈಕ್ರೋಸಾಫ್ಟ್ ಕಂಪನಿಯ ನೆರವಿನಿಂದ ‘ಉಮಾ’ (ಉದ್ಯೋಗ ಮಿತ್ರ ಅಸಿಸ್ಟೆಂಟ್) ಎಂಬ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ

ಬೆಂಗಳೂರು: ‘ಉಮಾ’ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು ಫೆಬ್ರುವರಿ ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರಾಜ್ಯದಲ್ಲಿ ಹೂಡಿಕೆ ಹೆಚ್ಚಿಸಿ, ಕೈಗಾರಿಕೆಗಳ ನಿರ್ಮಾಣದ ವೇಗ ಹೆಚ್ಚಿಸಲು ಯೋಜನೆಗಳ ಅನುಷ್ಠಾನದ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು ಅವಶ್ಯಕ. ಈ ಹಿನ್ನೆಲೆಯಲ್ಲಿ ಉದ್ಯೋಗ ಮಿತ್ರ ಅಸಿಸ್ಟೆಂಟ್ ತಂತ್ರಾಂಶ ‘ಉಮಾ’ ಅಭಿವೃದ್ಧಿಪಡಿಸಲಾಗಿದ್ದು #ಏಕಗವಾಕ್ಷಿ ಯೋಜನೆಯಡಿ ಹಸಿರು ನಿಶಾನೆ ಪಡೆದ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಲಾಗುವುದು.

33 ಇಲಾಖೆಗಳ 147 ಸೇವೆಗಳಿಗೆ ಈ ತಂತ್ರಾಂಶದಿಂದ ಅನುಮೋದನೆ ಸಿಗಲಿದ್ದು 300 ದಿನ ತೆಗೆದುಕೊಳ್ಳುತ್ತಿದ್ದ ಅನುಮೋದನೆ ಇನ್ಮುಂದೆ 60-70 ದಿನದಲ್ಲಿ ಲಭ್ಯವಾಗಲಿದೆ. ಈ ತಂತ್ರಾಂಶವನ್ನು ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಹೂಡಿಕೆ ಮತ್ತು ಕೈಗಾರಿಕಾ ನಿರ್ಮಾಣ ಪ್ರಕ್ರಿಯೆಯನ್ನು ಸುಗಮಗೊಳಿಸಿ ಕರ್ನಾಟಕದ ಪ್ರಗತಿಯ ವೇಗ ಹೆಚ್ಚಿಸಲು ನಮ್ಮ ಸರ್ಕಾರವು ಬದ್ಧವಾಗಿದೆ ಎಂದಿದ್ದಾರೆ.

Previous articleದೇವನಿಲ್ಲವೆಂಬ ನಿರೀಶ್ವರವಾದವೇ ಬ್ರಹ್ಮಹತ್ಯೆ
Next articleಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಗಾಯಕಿ ಶಾರದಾ ಸಿನ್ಹಾ ನಿಧನ