ಹುಲಿ ಉಗುರಿನ ಡಾಲರ್ ಪತ್ತೆ ಇಬ್ಬರ ಬಂಧನ

0
18

ಚಿಕ್ಕಮಗಳೂರು: ಮೂಡಿಗೆರೆ ಪಟ್ಟಣದ ಭಾರತಿ ಬೈಲ್ ಕುಂಡ್ರಾದ ನಿವಾಸಿ ಸತೀಶ್ ಬಳಿ ಬೆಳ್ಳಿ ಸರದಲ್ಲಿ ಹುಲಿ ಉಗುರು ಪತ್ತೆಯಾಗಿದೆ.
ಈತ, ಮತ್ತೋರ್ವ ಆರೋಪಿ ಹುಲ್ಲೇಮನೆ ಕುಂದೂರಿನ ಕೆ.ಎಸ್.ರಂಜಿತ್ ಜೊತೆ ಸೇರಿ ಹುಲಿ ಉಗುರು ಸಂಗ್ರಹಿಸಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಲೇ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರಕರಣ ಸಂಬಂಧ ಇನ್ನಿಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದು, ಹುಲಿ ಉಗುರನ್ನ ಏತಕ್ಕಾಗಿ ಸಂಗ್ರಹಿಸಿದ್ದರು ಎಂಬುದು ಇನ್ನಷ್ಟೆ ಮಾಹಿತಿ ಲಭ್ಯವಾಗಬೇಕಿದೆ.
ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಹಾಗೂ ಮೂಡಿಗೆರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಘು ಅವರ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆ ವಲಯ ಅರಣ್ಯ ಅಧಿಕಾರಿಗಳಾದ ಚರಣ್ ಕುಮಾರ್, ಆಲ್ದೂರು ವಲಯ ಅರಣ್ಯ ಅಧಿಕಾರಿ ಹರೀಶ್,ಮೂಡಿಗೆರೆ ಉಪ ವಲಯ ಅರಣ್ಯ ಅಧಿಕಾರಿಗಳಾದ ಶಿವಕುಮಾರ್,ಚೇತನ್ ಕುಮಾರ್, ಆರ್.ಹರೀಶ್,ಚೇತನ್ ಕುಮಾರ್ ಸುಮಂತ್ ಭಾಗವಹಿಸಿದ್ದರು

Previous articleಜಂಬೂ ಸವಾರಿಗೆ ಬಂದಿದ್ದ ನೇತ್ರಾವತಿ ಆನೆಗೆ ಹೆರಿಗೆಯ ಸಂಭ್ರಮ
Next articleಮರಳಿ ಸಿಕ್ಕ ಚಿನ್ನದ ತಾಳಿ: ಕುಟುಂಬಸ್ಥರ ಮೊಗದಲ್ಲಿ ಮಂದಹಾಸ