Home Advertisement
Home ನಮ್ಮ ಜಿಲ್ಲೆ ಹುಬ್ಬಳ್ಳಿಯ ದರ್ಗಾ ತೆರವಿಗೆ ಸಿದ್ದರಾಮಯ್ಯ ಆಕ್ಷೇಪ

ಹುಬ್ಬಳ್ಳಿಯ ದರ್ಗಾ ತೆರವಿಗೆ ಸಿದ್ದರಾಮಯ್ಯ ಆಕ್ಷೇಪ

0
90

ಬೆಳಗಾವಿ: ಹುಬ್ಬಳ್ಳಿಯ ಭೈರಿದೇವರಕೊಪ್ಪದ ದರ್ಗಾ ತೆರವಿಗೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಶೂನ್ಯ ವೇಳೆಯಲ್ಲಿ ಶಾಸಕ ಅಬ್ಬಯ್ಯ ಪ್ರಸಾದ ಈ ವಿಷಯವನ್ನು ಪ್ರಸ್ತಾಪ ಮಾಡಿದರು. ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಧ್ವನಿಗೂಡಿಸಿ, ದರ್ಗಾ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯರ ಜೊತೆ ಮಾತುಕತೆ ನಡೆಸುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಥಳೀಯರ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಬಹಳ ವರ್ಷಗಳಿಂದ ಇದ್ದ ದರ್ಗಾ ಅದು. ನಾನು ಸಿಎಂ ಆಗಿದ್ದಾಗಲೂ ದರ್ಗಾ ತೆರವು ವಿಚಾರ ಬಂದಿತ್ತು. ಆದರೆ ರಸ್ತೆಗಾಗಿ ದರ್ಗಾ, ಗುಡಿ ಯಾವುದನ್ನೂ ಮುಟ್ಟಲು ಹೋಗಬೇಡಿ ಎಂದಿದ್ದೆ. ಇವಾಗ ರಸ್ತೆ ಆಗಿದೆ, ಕೋರ್ಟ್ ಸ್ಟೇ ತೆರವಾದ ಹಿನ್ನೆಲೆಯಲ್ಲಿ ಇದ್ದಕ್ಕಿದ್ದಂತೆ ದರ್ಗಾವನ್ನು ತೆರವುಗೊಳಿಸಲು ಮುಂದಾಗಿದ್ದು‌ ಸರಿಯಲ್ಲ ಎಂದರು.

Previous articleಮೀಸಲಾತಿ ನೀಡಿದರೆ ಕಲ್ಲುಸಕ್ಕರೆ, ಇಲ್ಲದಿದ್ದರೆ ಬಂಡಾಯ-ಬಸವಜಯ ಮೃತ್ಯುಂಜಯ ಸ್ವಾಮೀಜಿ
Next articleಸುವರ್ಣ ವಿಧಾನಸೌಧದ ಎದುರು ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರು ಚೆನ್ನಮ್ಮ ಪ್ರತಿಮೆ ಸ್ಥಾಪನೆಗೆ ಮುಂದಿನ ವಾರ ಅಡಿಗಲ್ಲು