ಹುಬ್ಬಳ್ಳಿ ವಕೀಲರ ಸಂಘಕ್ಕೆ ಎಂ.ಎಸ್. ಬಾಣದ ನೂತನ ಅಧ್ಯಕ್ಷ

0
25


ಹುಬ್ಬಳ್ಳಿ: ಹುಬ್ಬಳ್ಳಿ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎಸ್‌. ಬಾಣದ, ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತ ಶಿಗ್ಗಾಂವ ಆಯ್ಕೆಯಾಗಿದ್ದಾರೆ.
ನಗರದ ಹೊಸೂರಿನ ಕೋರ್ಟ್‌ ಆವರಣದಲ್ಲಿನ ವಕೀಲದ ಸಂಘದ ಕಚೇರಿಯಲ್ಲಿ ಶುಕ್ರವಾರ ಸಂಘದ ಪದಾಧಿಕಾರಿಗಳ ಹಾಗೂ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿತ್ತು. ಸಂಘದ 1,492 ಮತದಾರರಲ್ಲಿ 1,178 ಸದಸ್ಯರು ಮತ ಚಲಾಯಿಸಿದ್ದರು.
ಇದೇ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಏಳು ಮಂದಿ ಸ್ಪರ್ಧಿಸಿದ್ದರು. ಪ್ರಥಮ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಎಸ್‌. ಬಾಣದ ಅವರು 472 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಮಾಜಿ ಅಧ್ಯಕ್ಷ ಡಿ.ಎಂ. ನರಗುಂದ 189 ಮತಗಳನ್ನು ಪಡೆದರು. ಪುನರ್‌ ಆಯ್ಕೆ ಬಯಸಿದ್ದ ಸಿ.ಆರ್‌. ಪಾಟೀಲ 170 ಮತಗಳನ್ನು ಪಡೆದರು.
ಕಳೆದ ಬಾರಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋತಿದ್ದ ಹನುಮಂತ ಶಿಗ್ಗಾಂವ ಅವರು, ಈ ಬಾರಿ 616 ಮತಗಳನ್ನು ಪಡೆದು, ಪ್ರತಿಸ್ಪರ್ಧಿ ಪಿ.ಎಚ್‌. ತೋಟದ 426 ವಿರುದ್ಧ ಗೆಲುವಿನ ನಗೆ ಬೀರಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿತ್ತು. ಎ.ಕೆ. ಅಕ್ಕಿ ಅವರು 435 ಅತಿ ಹೆಚ್ಚು ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಲಕ್ಷ್ಮಣ ಬೀಳಗಿ 372 ಮತಗಳನ್ನು ಪಡೆದರು.
ಸಹ ಕಾರ್ಯದರ್ಶಿಯಾಗಿ ಜಿ.ಡಿ.ಜಂತ್ಲಿ 497 ಮತಗಳನ್ನು ಪಡೆದು ಆಯ್ಕೆಯಾದರು.
ಸಿನಿಯರ್ ಕೌನ್ಸಿಲ್ ಒಟ್ಟು 13 ಜನ ಸ್ಪರ್ಧಿಗಳಲ್ಲಿ ಕೆ.ಬಿ.ಶಿವಕುಮಾರ 552, ಎಲ್.ಎಸ್. ಪಾಟೀಲ್ 464, ಎಸ್‌.ಕೆ. ಬೆನಕನ್ನವರ 393 ಆಯ್ಕೆಯಾದರು.
ಕಿರಿಯ ಕಾರ್ಯಕಾರಿಣಿ ಮಂಡಳಿಗೆ ಲಭ್ಯವಿರುವ ಮೂರು ಸ್ಥಾನಗಳಿಗೆ ಒಂಬತ್ತು ಮಂದಿ ಕಣದಲ್ಲಿದ್ದರು ಅದರಲ್ಲಿ ವರುಣ ಹಳೇಮನಿ 510, ಶ್ರೀಧರ ದೊಡ್ಡಮನಿ 486, ಮಧು ಕೋಳಂಬೆ 433 ಆಯ್ಕೆಯಾದರು.
ಹಿರಿಯ ಮಹಿಳಾ ಆಡಳಿತ ಮಂಡಳಿಯ ಒಂದು ಸ್ಥಾನಕ್ಕೆ‌ ಕಾಂಚನಾ ಹಣಗಿ ಮತ್ತು ಕಿರಿಯ ಮಹಿಳಾ ಆಡಳಿತ ಮಂಡಳಿಯ ಒಂದು ಸ್ಥಾನಕ್ಕೆ ಶ್ರೇಯಾ ಕಟಗಿಮಠ ಆಯ್ಕೆಯಾದರು.
ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ ಮತದಾನ ಪ್ರಕ್ರಿಯೆ ನಡೆಯಿತು. ಸಂಜೆ 6ರಿಂದ ರಾತ್ರಿ ೧೧.೫೦ ರವರೆಗೆ ಮತ ಎಣಿಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಎಸ್‌.ಜಿ. ಅರಗಂಜಿ ಅವರ ಜೊತೆ ಐ.ಕೆ. ಬೆಳಗಲಿ ಹಾಗೂ ಎಸ್‌.ವೈ. ದುಂಡರೆಡ್ಡಿ ಕರ್ತವ್ಯ ನಿರ್ವಹಿಸಿದರು.
ಖಜಾಂಚಿ ಸ್ಥಾನಕ್ಕೆ ಮತಗಳಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ಮತ ಎಣಿಕೆ ಇಂದು‌ ನಡೆಯಲಿದೆ. ಎಸ್‌.ಜಿ. ದೊಡ್ಡಮನಿ ಮತ್ತು ಎಸ್‌.ವಿ. ಗುಳೇದ ಮಧ್ಯೆ ಹಣಾಹಣಿ ಏರ್ಪಟ್ಟಿದೆ

Previous articleನಂದಿನಿ ಹಾಲಿನ ದರ 3 ರೂ. ಹೆಚ್ಚಳ
Next articleಮಾತಿನ ಮಂಟಪದಲ್ಲಿ ಮಾತಿಗೆ ಬಂದಿತು ಬರ