ಹುಬ್ಬಳ್ಳಿ ಗಣೇಶೋತ್ಸವಕ್ಕೆ ಮಂಟಪ ಸಿದ್ಧತೆ ಜೋರು

0
8

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಗಣೇಶೋತ್ಸವ ಎಂದರೆ ಎಲ್ಲಿಲ್ಲದ ಸಡಗರ ತುಂಬಿರುತ್ತದೆ. ಇದಕ್ಕಾಗಿ ಸುಮಾರು ೧ ತಿಂಗಳಿಗೂ ಹೆಚ್ಚು ಕಾಲ ಸಿದ್ಧತೆ ನಡೆಯುತ್ತದೆ. ೧೧ ದಿನಗಳ ಕಾಲ ಬಗೆ ಬಗೆಯ ಸಂಸ್ಕೃತಿ, ಇತಿಹಾಸ ಸಾರುವ ರೂಪಕಗಳು ಸೇರಿ ಭರ್ಜರಿಯಾಗಿ ಹಬ್ಬ ಆಚರಣೆಯಾಗುತ್ತದೆ. ಅಂತೇಯೇ ಹುಬ್ಬಳ್ಳಿಯಲ್ಲಿ ಗಣೇಶೋತ್ಸವಕ್ಕೆ ಬರದ ಸಿದ್ಧತೆ ನಡೆದಿದೆ.
ಹುಬ್ಬಳ್ಳಿಯಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತವೆ. ಅದಕ್ಕಾಗಿ ವೈಭವದ ಮಂಟಪ ಹಾಕಿ ಜಗಮಗಿಸುವ ವಿದ್ಯುತ್ ಅಲಂಕಾರ ಮಾಡಲಾಗುತ್ತದೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಖರ್ಚು ಮಾಡಲಾಗುತ್ತದೆ. ಒಂದು ಮಂಟಪಕ್ಕಿಂತ ಮತ್ತೊಂದು ಮಂಟಪ ನೋಡುವುದೇ ವಿಶೇಷ. ವಿಶೇಷವಾಗಿ ಒಂದೊಂದು ಮಂಟಪ ಕೂಡ ಒಂದೊಂದು ದೇವಸ್ಥಾನ, ಇತಿಹಾಸ ಸಾರುತ್ತವೆ.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಪ್ರತಿವರ್ಷ ನೋಡಲೇಬೇಕೆನ್ನುವ ದಾಜಿಬಾನ್ ಪೇಟೆ, ಮರಾಠಗಲ್ಲಿ ಹುಬ್ಬಳ್ಳಿ ಕಾ ಮಹಾರಾಜ್, ಹುಬ್ಬಳ್ಳಿ ಕಾ ರಾಜ್ ಗಣೇಶೋತ್ಸವ ಮಂಡಳಿ ಹಾಗೂ ದುರ್ಗದ ಬಯಲಿನಲ್ಲಿ ಗಣೇಶ ಪ್ರತಿಷ್ಠಾಪನೆಗೆ ಮಂಟಪ ಹಾಕುವ ಕಾರ್ಯ ನಡೆಯುತ್ತಿದೆ.
ಕಳೆದ ವರ್ಷ ಮಹಿಷಾಸುರ ಮರ್ದಿನಿ ರೂಪಕ ಪ್ರದರ್ಶಿಸಿ ಸೈ ಎನ್ನಿಸಿಕೊಂಡಿದ್ದ ದುರ್ಗದ ಬಯಲು ಗಣೇಶೋತ್ಸವ ಮಂಡಳಿ ಈ ವರ್ಷ ಮತ್ತೊಂದು ವಿಶೇಷ ವಿನ್ಯಾಸದೊಂದಿಗೆ ಮಂಟಪ ಹಾಕಿ ಗಣೇಶೋತ್ಸವ ಹಾಕಲು ಮುಂದಾಗಿವೆ.

Previous articleರಾಜಧರ್ಮವ ಮರೆತರೆ ಜನಧರ್ಮ ಒಪ್ಪದಯ್ಯ !
Next articleಮಾತುಮುತ್ತು