ಇಳಕಲ್ : ಹುಚ್ಚೆದ್ದ ಗೋವು ಒಂದು ರೋಷಾವೇಷದಿಂದ ಸಂಚರಿಸಿ ಮೂವರನ್ನು ಗಾಯಗೊಳಿಸಿದ ಘಟನೆ ಶನಿವಾರದಂದು ರಾತ್ರಿ ನಡೆದಿದೆ
ಇಲ್ಲಿನ ನಗರಸಭೆಯ ಕಾರ್ಯಾಲಯದ ಹತ್ತಿರದ ಸುವರ್ಣ ರಂಗಮಂದಿರ ರಸ್ತೆಯಲ್ಲಿ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು ಮನೆಯ ಮುಂದೆ ಕುಳಿತ ಇಬ್ಬರು ವಯಸ್ಕರಿಗೆ ಮತ್ತು ಓರ್ವ ಮಗುವಿಗೆ ತೀವ್ರ ಗಾಯಗಳಾಗಿವೆ.
ವಿಷಯ ತಿಳಿದ ಹಿಂದೂ ಸೇವಾ ಸಮಿತಿಯ ಸದಸ್ಯರು ಪರಶುರಾಮ ಬಿಸಲದಿನ್ನಿ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿ ಗೋವನ್ನು ಹಿಡಿದು ಅದನ್ನು ಪಶು ಚಿಕಿತ್ಸಾಲಯಕ್ಕೆ ಒಯ್ಯುವ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಗೋವು ರಕ್ತ ಕಾರಿ ಮೃತಹೊಂದಿದೆ.
ನಂತರ ಸಮಿತಿಯವರು ಮೃತ ಹೊಂದಿದ ಗೋವನ್ನು ವಿಜಯ ಮಹಾಂತೇಶ ಗದ್ದುಗೆಯ ಹತ್ತಿರದಲ್ಲಿ ಅದರ ಅಂತ್ಯಸಂಸ್ಕಾರವನ್ನು ಮಾಡಿದ್ದಾರೆ.