ಹು- ಧಾ ಸೆಂಟ್ರಲ್ ಕ್ಷೇತ್ರದ ಗೆಲುವು ಬಿಜೆಪಿ ಕಾರ್ಯಕರ್ತರ ಗೆಲುವು ಮಹೇಶ ಟೆಂಗಿನಕಾಯಿ

0
23

ಹುಬ್ಬಳ್ಳಿ : ಹುಬ್ಬಳ್ಳಿ – ಧಾರವಾಡ ಸೆಂಟ್ರಲ್ ಕ್ಷೇತ್ರದ ಗೆಲುವು ಬಿಜೆಪಿ ಕಾರ್ಯಕರ್ತರ ಗೆಲುವಾಗಿದೆ. ಬಿಜೆಪಿ ತತ್ವ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟು ಮತದಾರರು ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಇದು ನನ್ನ ಗೆಲುವಲ್ಲ ಪಕ್ಷದ ಕಾರ್ಯಕರ್ತರ ಗೆಲುವು ಎಂದು ಮಹೇಶ ಟೆಂಗಿನಕಾಯಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಮಾರು 35 ಸಾವಿರಕ್ಕಿಂತ ಹೆಚ್ಚಿನ ಮತಗಳ ಅಂತರದ ಗೆಲುವು ನಿರೀಕ್ಷೆ ಮಾಡಿದ್ದೆವು. ನಿರೀಕ್ಷೆಯಂತೆಯೇ ಮತದಾರರು ಬೆಂಬಲಿಸಿದ್ದಾರೆ. ವ್ಯಕ್ತಿ ಮುಖ್ಯ ಅಲ್ಲ, ಬಿಜೆಪಿ ಪಕ್ಷ, ಕಾರ್ಯಕರ್ತರು ಮುಖ್ಯ ಎಂಬುದು ಸಾಬೀತಾಗಿದೆ. ಭವಿಷ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟರೆ ಯಾವ ರೀತಿ ಗೆಲುವು ಲಭಿಸುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಈ ಫಲಿತಾಂಶ ಬಂದಿದೆ ಎಂದರು.
ಸೆಂಟ್ರಲ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹಲವು ಕನಸುಗಳಿವೆ. ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸುತ್ತೇನೆ. ಜನರ ನಿರೀಕ್ಷೆ ಹುಸಿಗೊಳಿಸುವುದಿಲ್ಲ ಎಂದು ಮಹೇಶ ಟೆಂಗಿನಕಾಯಿ ಹೇಳಿದರು.

Previous articleಎಂ.ಬಿ. ಪಾಟೀಲ್ ಗೆಲುವು
Next articleಕ್ಷೇತ್ರದ ಜನರು ಕೈ ಹಿಡಿದಿದ್ದಾರೆ: ಸಂತೋಷ ಲಾಡ್