ಹಿಂದೂಗಳ ಪಾಲಿಗೆ ತುರ್ತು ಪರಿಸ್ಥಿತಿಯ ವಾತಾವರಣ

0
38

ಮಂಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಶಿಫಾರಸ್ಸಿನ ಮೇರೆಗೆ ಕಾಂಗ್ರೆಸ್ ಸರ್ಕಾರ ಡಿಜಿ ಮೂಲಕ ರಾಜ್ಯದ ಎಲ್ಲಾ‌ ಪೊಲೀಸ್ ಆಯುಕ್ತರಿಗೆ, ಎಸ್‌ಪಿಗಳಿಗೆ ಪತ್ರ ಬರೆದು ನಾಡಿನ ಖ್ಯಾತ ವಾಗ್ಮಿ, ಚಿಂತಕ ಶ್ರೀ ಚಕ್ರವರ್ತಿ ಸೂಲಿಬೆಲೆಯವರನ್ನು ಗುರಿಯನ್ನಾಗಿಸಿಕೊಂಡು ಷಡ್ಯಂತ್ರ ರೂಪಿಸಿರುವ ಬಗ್ಗೆ ದಾಖಲೆಗಳ ಸಹಿತ ಸ್ಪಷ್ಟವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ಆರೋಪಿಸಿದರು.

ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸುವ ಮತೀಯ ಶಕ್ತಿಗಳ ಹೆಡೆಮುರಿ ಕಟ್ಟಬೇಕಾಗಿದ್ದ ರಾಜ್ಯ ಸರ್ಕಾರ, ದೇಶ-ಧರ್ಮ-ಸಮಾಜ-ಪರಿಸರ ಕುರಿತು ಯುವ ಜನಾಂಗವನ್ನು ಜಾಗೃತಿಗೊಳಿಸಿ ನಾಡಿನಾದ್ಯಂತ ಖ್ಯಾತಿ ಗಳಿಸಿರುವ ಚಕ್ರವರ್ತಿ ಸೂಲಿಬೆಲೆಯಂತಹ ಚಿಂತಕರನ್ನು ಗುರಿಯಾಗಿಸಿಕೊಳ್ಳುವ ಮೂಲಕ ತಾನು ಎಂದಿಗೂ ಹಿಂದೂ ವಿರೋಧಿಯೇ ಎಂಬುದನ್ನು ಮತ್ತೆ ಸಾಬೀತು ಪಡಿಸಿದೆ. ಕರಾವಳಿ ಭಾಗದಲ್ಲಿ ತನ್ನ ಓಲೈಕೆ ರಾಜಕಾರಣ ಮುಂದುವರಿಸುವ ಭಾಗವಾಗಿ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು, ಹಿಂದೂ ಸಂಘಟನೆಗಳ ಮುಖಂಡರು, ಮಾರ್ಗದರ್ಶಕರು, ಕಾರ್ಯಕರ್ತರು, ಚಿಂತಕರುಗಳನ್ನು ಗುರಿಯಾಗಿಸಿಕೊಂಡು ಬೆದರಿಸುವ, ಕಿರುಕುಳ ನೀಡುವ ಚಾಳಿ ಆರಂಭಿಸಿರುವ ರಾಜ್ಯ ಸರ್ಕಾರ ಈ ಕೂಡಲೇ ಎಲ್ಲವನ್ನು ನಿಲ್ಲಿಸಬೇಕು ಎಂದು ಶಾಸಕರು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ, ಹಿಂದೂಗಳ ಪಾಲಿಗೆ ತುರ್ತು ಪರಿಸ್ಥಿತಿಯ ವಾತಾವರಣವನ್ನು ಸೃಷ್ಟಿಸುವುದಾದರೆ, ಬಾಬಾ ಸಾಹೇಬ್ ಅಂಬೇಡ್ಕರ್‌ವರ ಸಂವಿಧಾನದ ಆಶಯಕ್ಕೆ ಬದ್ಧವಾಗಿ ಪ್ರಜಾಪ್ರಭುತ್ವ ಮಾದರಿಯಲ್ಲಿ ದೇಶ ಭಕ್ತರ ರಕ್ಷಣೆಗೆ ಭಾರತೀಯ ಜನತಾ ಪಾರ್ಟಿಯು ಸದಾ ಸಿದ್ದವಾಗಿರುತ್ತದೆ ಎಂದು ಶಾಸಕರು ಹೇಳಿದರು.

Previous articleಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ದೊಂಬರಾಟ
Next articleಕೋಮು ಗಲಭೆ ನಿಯಂತ್ರಣ: ೨೪೮ ಸಿಬಂದಿಗಳ ವಿಶೇಷ ಕಾರ್ಯಪಡೆಗೆ ಇಂದು ಚಾಲನೆ