ಹಿಂದೂ ಸಮಾಜೋತ್ಸವ: ಪಂಪ್‌ವೆಲ್‌ಗೆ ನಿರ್ಬಂಧ

0
17

ಉಡುಪಿ: ಇಲ್ಲಿನ ಎಂಜಿಎಂ ಕ್ರೀಡಾಂಗಣದಲ್ಲಿ ಇಂದು ಸಂಜೆ 4ಗಂಟೆಗೆ ನಡೆಯುವ ಶೌರ್ಯ ಜಾಗರಣಾ ಯಾತ್ರೆ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸದಂತೆ ವಿಶ್ವ ಹಿಂದೂ ಪರಿಷತ್ ನೇತಾರ ಶರಣ್ ಪಂಪ್‌ವೆಲ್ ಅವರಿಗೆ ಉಡುಪಿ ಜಿಲ್ಲಾ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.
ಅವರು ಇತ್ತೀಚೆಗೆ ಉಡುಪಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ಶರಣ್ ವಿರುದ್ಧ ದಾಖಲಿಸಿದ್ದರು. ಶರಣ್ ಆ ಬಗ್ಗೆ ನ್ಯಾಯಾಲಯದಿಂದ ಶರತ್ತು ಬದ್ಧ ಜಾಮೀನು ಪಡೆದಿದ್ದು, ಜಾಮೀನು ನಿಯಮ ಉಲ್ಲಂಘನೆ ಆರೋಪದಡಿ ಶರಣ್‌ಗೆ ಪೊಲೀಸರಿಂದ ತಡೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾ ಎಸ್ಪಿ ಡಾ. ಅರುಣ್ ಕೆ. ಮಾಹಿತಿ ನೀಡಿದ್ದಾರೆ.
ವಿಶ್ವ ಹಿಂದೂ ಪರಿಷತ್‌ಗೆ 60 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶೌರ್ಯ ಜಾಗರಣ ಯಾತ್ರೆ ರಾಜ್ಯದಾದ್ಯಂತ ಸಂಚರಿಸಿ ಉಡುಪಿಯಲ್ಲಿ ಸಮಾಪನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದೆ.

Previous articleಬಿಜೆಪಿ ಜತೆ ಕುಮಾರಸ್ವಾಮಿ ಕೈ ಜೋಡಿಸಿದ್ದು ಡಿಕೆಶಿ ಜೈಲಿಗೆ ಕಳಿಸಲು…
Next articleರಾಜ್ಯದಲ್ಲಿ ಪಟಾಕಿ ಬ್ಯಾನ್