ಹಾಸನ: ಡಿಸಿಸಿ ಬ್ಯಾಂಕ್​ ಮೇಲೆ ಐಟಿ ದಾಳಿ

0
24
ಹಾಸನ ಡಿಸಿಸಿ ಬ್ಯಾಂಕ್‌

ಹಾಸನ: ಹಾಸನದ ಹೆಚ್‌ಡಿಸಿಸಿ ಬ್ಯಾಂಕ್ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆದಿದೆ, ಹೆಚ್​ಡಿ ರೇವಣ್ಣ ಅವರ ಆಪ್ತ ಸೋಮನಹಳ್ಳಿ ನಾಗರಾಜ್ ಅದ್ಯಕ್ಷರಾಗಿರುವ ಹಾಸನದ ಡಿಸಿಸಿ ಬ್ಯಾಂಕ್‌ನಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬ್ಯಾಂಕ್ ಕಾರ್ಯನಿರ್ವಹಣೆ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದಿದ್ದಾರೆ, ಶುಕ್ರವಾರ ರಾತ್ರಿಯೇ ಬ್ಯಾಂಕ್​ಗೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಶನಿವಾರವೂ ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ.
ಭದ್ರತಾ ಉದ್ದೇಶಕ್ಕಾಗಿ ಬ್ಯಾಂಕ್ ಮತ್ತು ಸುತ್ತಮುತ್ತಲಿನಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳು ಸುರಕ್ಷಿತ ಲಾಕರ್‌ಗಳು ಮತ್ತು ಖಾತೆಗಳ ಪುಸ್ತಕಗಳನ್ನು ಶೋಧಿಸಿದ್ದಾರೆ ಮತ್ತು ಪ್ರಮುಖ ದಾಖಲೆಗಳನ್ನು ಶನಿವಾರ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಿಲ್ಲ. ಹಾಸನ ಡಿಸಿಸಿ ಬ್ಯಾಂಕ್ ಮೂರು ಲಕ್ಷಕ್ಕೂ ಅಧಿಕ ಖಾತೆದಾರರನ್ನು ಹೊಂದಿದೆ.

Previous articleಕಳಪೆ ಕಾಮಗಾರಿ: ಇಬ್ಬರ ಅಮಾನತು
Next articleಮತ್ತೆ ‘ಕೈ’ ಸೇರಲು ಮುಂದಾದ ಎ.ಬಿ.ಮಾಲಕರೆಡ್ಡಿ