ಹನುಮನನ್ನು ಕೆಣಕಿದ ರಾವಣ ಉಳಿದಿಲ್ಲ ಕಾಂಗ್ರೆಸ್ ಉಳಿಯುತ್ತಾ

0
14

ಬಳ್ಳಾರಿ: ಹನುಮನನ್ನು ಕೆಣಕಿದ ರಾವಣ ಮಣ್ಣಾದಂತೆ ಕಾಂಗ್ರೆಸ್ ಸಹ ಮುಂದಿನ ಲೋಕಸಭಾ ಚುನಾವಣೆ ಬಳಿಕ ಮಾಜಿ ಅಗಲಿದ್ದಾರೆ, ಕಾಂಗ್ರೆಸ್ ನಿರ್ನಾಮ ಆಗಲಿದೆ ಎಂದು ಬಿಜೆಪಿ ಮುಖಂಡ ಸಿ. ಟಿ. ರವಿ ಕುಟುಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಫಲಿತಾಂಶ ಬಂದ ಒಂದು ತಿಂಗಳಲ್ಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗತ್ತೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಮಾಜಿ ಆಗ್ತಾರೆ. ಅವರು ಕೆಣಕಿರೋದು ಹನುಮನನ್ನ ಕೆಣಿಕಿದ ರಾವುಣನನ್ನೇ ಬಿಟ್ಟಿಲ್ಲ ಹನುಮ, ಇವರನ್ನ ಬಿಡ್ತಾನಾ ಹನುಮ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಬಂದ ಮೇಲೆ ಮಕ್ಕಳು ಕುಡಿಯೋ ಹಾಲಿನ ದರ ಏರಿಸಿದ್ರು, ಇನ್ನೊಂದು ಕಡೆ ಕ್ವಾಟರ್ ದರ ಏರಿಸಿದರು. ಸಿದ್ದರಾಮಯ್ಯ ಬರಿ ನಾನ್ ಕೊಟ್ಟ ನಾನ್‌‌ ಕೊಟ್ಟೆ ಎಂದು ಎದೆ ಬಡಿದುಕೊಳ್ತಾ ಇದ್ದಾರೆ. ಮನೆ ಹಾಳ್ ಕಾಂಗ್ರೆಸ್ ಬಂದಮೇಲೆ ರೈತರ ಪಾಹಣಿಗೆ ಹತ್ತು ಇದ್ದದ್ದನ್ನ 40 ಕ್ಕೆ ಏರಿಸಿದ್ರು ಎಂದು ವಾಗ್ದಾಳಿ ಮಾಡಿದ್ರು.
ರಾಷ್ಟ್ರ ಪತಿಗೆ ಅವಳು ಇವಳು ಅಂತಾ ಮಾತಾಡಿದ್ರು ಎಂದು ಜರಿದ ಅವರು, ಈ ಚುನಾವಣೆ ರಾಮ ಮತ್ತು ಬಾಬರ್ ನಡುವಿನ ಚುನಾವಣೆ. ಬಾಬರ್ ಪರ ಕೂಗಿದ ಕಾಂಗ್ರೆಸ್ ನವರು ಈಗ ಜೈ ರಾಮ ಅಂತಿದ್ದಾರೆ. ಈ ಚುನಾವಣೆ ಕಾಶಿ ವಿಶ್ವನಾಥ ಹಾಗೂ ಔರಂಗಜೇಬ ನಡುವಿನ ಚುನಾವಣೆ. ಈ ಚುನಾವಣೆ ಟಿಪ್ಪು ಮತ್ತು ಹನುಮಂತ ನಡುವಿನ ಚುನಾವಣೆ. ಈ ಸೋಮನಾಥ ಮತ್ತು ಘಜ್ನಿ ನಡುವಿನ ಚುನಾವಣೆ. ಈ ಚುನಾವಣೆ ಮಥುರಾದ ಕೃಷ್ಣನ ಚುನಾವಣೆ. ಅನುಭವ ಮಂಟಪದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಬಸವಣ್ಣ ಅವರ ಮೂರ್ತಿ ಕೂರಬೇಕು ಅಂದ್ರೆ ಮೋದಿ ಬರಬೇಕು. ದೇಶ ಮೊದಲು ಎನ್ನುವುದು ನಮ್ಮ ಸ್ಲೋಗನ್, ನಮ್ಮ ನಾಯಕ ಜಗತ್ತು ಮೆಚ್ಚಿದ ಮೋದಿ,. ಪಾಕಿಸ್ತಾನದವರೂ ಮೋದಿಯಂತಹ ನಾಯಕ ಬೇಕು ಎಂದಿದ್ದಾರೆ.

Previous articleಒಂಬತ್ತು ವರ್ಷಗಳ ದೃಢವಾದ ಆರ್ಥಿಕ ಚಿತ್ರಣ
Next articleದೇಶದ ಸರ್ವಾಂಗೀಣ ಅಭಿವೃದ್ಧಿಗೆ ಬಜೆಟ್ ಪೂರಕ