ನವದೆಹಲಿ: ಹಗರಣಗಳೇ ಈಗ ಅಪ್ ಕೊಚ್ಚಿ ಹೋಗುವಂತೆ ಮಾಡಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯ ನಡವಳಿಕೆ ಅಲೋಚನೆ ಶುದ್ದವಾಗಿರಬೇಕು. ಜೀವನವು ದೋಷರಹಿತವಾಗಿರಬೇಕು ತ್ಯಾಗ ಇರಬೇಕು. ಇದನ್ನ ನಾನು ಯವಾಗಲೂ ಹೇಳಿದ್ದೇನೆ. ಈ ಗುಣಗಳು ಜನರು ನಂಬಿಕೆ ಇಡಲು ಅನುವು ಮಾಡಿಕೊಡುತ್ತವೆ. ಈ ವಿಚಾರವನ್ನ ಹಿಂದಯೇ ಕೇಜ್ರಿವಾಲ್‌ಗೆ ಹೇಳಿದ್ದೆ ಅದರೆ ಅವರು ಗಮನ ಹರಿಸಲಿಲ್ಲ, ಕೇಜ್ರಿವಾಲ್ ಮದ್ಯದ ಹಗರಣದಲ್ಲಿ ಮುಳುಗಿದ್ದರು. ಹಗರಣಗಳಿಂದಲೇ ಅಪ್ ಕೊಚ್ಚಿ ಹೋಗುವಂತೆ ಮಾಡಿದೆ, ಅರವಿಂದ್ ಕೇಜ್ರಿವಾಲ್ ವರ್ಚಸ್ಸು ಆ ಕಾರಣದಿಂದಾಗಿ ಕುಗ್ಗಿತು ಮತ್ತು ಅದಕ್ಕಾಗಿಯೇ ಅವರು ಚುನಾವಣೆಯಲ್ಲಿ ಕಡಿಮೆ ಮತಗಳನ್ನು ಪಡೆದರು ಎಂದಿದ್ದಾರೆ