ಹಕ್ಕು ಚಲಾಯಿಸಿದ ಸಿದ್ದರಾಮಯ್ಯ

0
20

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಜಿಲ್ಲೆ ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮತದಾನದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ. ಹಾಗೆಯೇ ಈ ಬಾರಿಯ ಚುನಾವಣೆಯಲ್ಲಿಯೂ ಜನ ಆಶೀರ್ವಾದ ಮಾಡುತ್ತಾರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಅಲೆ ಇದೆ, ಬೆಲೆಯೇರಿಕೆ, ನಿರುದ್ಯೋಗ, ಬಡತನ, ಕೋಮುವಾದ, ದ್ವೇಷ ರಾಜಕೀಯಗಳನ್ನು ಕಿತ್ತೆಸೆದು ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮರುಸ್ಥಾಪನೆ ಮಾಡಲು ನನ್ನ ಹುಟ್ಟೂರಾದ ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಲ್ಲಿ ಪ್ರಜ್ಞಾವಂತಿಕೆಯಿಂದ ನನ್ನ ಹಕ್ಕಿನ ಮತ ಚಲಾಯಿಸಿದೆ. ನೀವು ಕೂಡ ತಪ್ಪದೆ ಮತ ಚಲಾಯಿಸಿ, ಭಾರತ ಗೆಲ್ಲಿಸಿ ಎಂದರು.

Previous articleಪಾಕ್‌ ಯುವತಿಗೆ ಮರುಜೀವ ನೀಡಿದ ಭಾರತದ ಹೃದಯ
Next articleಮುಸ್ಲೀಮರ ಮೀಸಲಾತಿ ರದ್ದು, ನಮ್ಮ ನಿರ್ಧಾರಕ್ಕೆ ಬದ್ದರಾಗಿದ್ದೇವೆ